ಭಾನುವಾರ, ಆಗಸ್ಟ್ 14, 2022
28 °C

ಮಗಳ ಹೆಸರು ಬಹಿರಂಗಪಡಿಸಿದ ವೇಗದ ಓಟಗಾರ ಉಸೇನ್‌ ಬೋಲ್ಟ್‌ 

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಕಿಂಗ್‌ಸ್ಟನ್: ಜಗತ್ತಿನ ವೇಗದ ಓಟಗಾರ ಹಾಗೂ ಒಲಂಪಿಕ್ಸ್‌ನಲ್ಲಿ 8 ಬಾರಿ ಚಿನ್ನದ ಪದಕ ಗೆದ್ದಿರುವ ಉಸೇನ್‌ ಬೋಲ್ಟ್‌ ತಮ್ಮ ಪುತ್ರಿಯ ಹೆಸರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದಾರೆ.

ಇತ್ತೀಚಿಗಷ್ಟೆ ತಾನು ಅಪ್ಪನಾಗಿದ್ದೇನೆ ಎಂಬ ಖುಷಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಕಳೆದ ಮೇ ತಿಂಗಳಲ್ಲಿ ಉಸೇನ್‌ ಗೆಳತಿ ಕಾಸಿ ಬೆನೆಟ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಜಮೈಕಾದ ವೇಗದ ಸರದಾರ ಬೋಲ್ಟ್, ಗೆಳತಿ ಕಾಸಿಯ ಜನ್ಮದಿನವಾದ ಜುಲೈ 7ರಂದು ಮಗಳ ಹೆಸರನ್ನು ಬಹಿರಂಗಪಡಿಸಿರುವುದು ವಿಶೇಷ. ಗೆಳತಿ ಮತ್ತು ಪುತ್ರಿಯ ಫೋಟೊವನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಕಾಸಿ ಬೆನೆಟ್‌ ಮೇ ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರೂ ಮಗುವಿನ ಚಿತ್ರವನ್ನಾಗಲಿ, ಹೆಸರನ್ನಾಗಲಿ ಬಹಿರಂಗಪಡಿಸಿದೇ ಗೌಪ್ಯವಾಗಿ ಇರಿಸಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ ಕಾಸಿ ಬೆನೆಟ್‌ಗೆ ಜನ್ಮದಿನದ ಶುಭಾಶಯ ಕೋರಿ, ನಿನ್ನ ಜೊತೆ ಈ ವಿಶೇಷ ದಿನ ಕಳೆಯಲು ನನಗೆ ಖುಷಿಯಾಗುತ್ತಿದೆ.  ನಿನ್ನ ಸಂತೋಷವಲ್ಲದೆ ನಾನು ಬೇರೇನೂ ಬಯಸಲಾರೆ. ನೀನು ಸದಾ ನಗುತ್ತಿರುವಂತಹ ಎಲ್ಲಾ ಪ್ರಯತ್ನಗಳನ್ನು ಮಾಡುವೆ ಎಂದು ಬರೆದುಕೊಂಡಿದ್ದಾರೆ. 

ಮುಂದುವರೆದು, ನಾವೀಗ ಪುತ್ರಿಯ ಜೊತೆಗೆ ಬದುಕಿನ ಹೊಸ ಅಧ್ಯಾಯ ಆರಂಭಿಸಿದ್ದೇವೆ. ನಮ್ಮ ಕುಟುಂಬವನ್ನು ಸದಾ ಖುಷಿಯಲ್ಲಿ ಇಡುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೇ ಉಸೇನ್‌ ಬೋಲ್ಟ್‌ ತಮ್ಮ ಪುತ್ರಿಗೆ 'ಒಲಿಂಪಿಯಾ ಲೈಟ್ನಿಂಗ್ ಬೋಲ್ಟ್' ಎಂದು ನಾಮಕರಣ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು