ಶನಿವಾರ, ಅಕ್ಟೋಬರ್ 23, 2021
22 °C
ತೇಶುಬ್ ದಿನೇಶ್‌, ಸಾನ್ವಿಗೆ ಕೆಡೆಟ್ ವಿಭಾಗದ ಪ್ರಶಸ್ತಿ

ರಾಜ್ಯ ಟೇಬಲ್ ಟೆನಿಸ್‌ ಟೂರ್ನಿ: ವರುಣ್, ನಿಹಾರಿಕಾ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಿಎಸ್‌ಟಿಟಿಎ ಪ್ರತಿನಿಧಿಸಿದ್ದ ವರುಣ್ ಕಶ್ಯಪ್ ಮತ್ತು ಎಂಎಸ್‌ಟಿಟಿಎನ ನಿಹಾರಿಕಾ ಅವರು ಸಿ.ವಿ.ಎಲ್‌ ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಸಬ್‌ ಜೂನಿಯರ್ ವಿಭಾಗದಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.  

ಬಾಲಕರ ವಿಭಾಗದ ಫೈನಲ್‌ನಲ್ಲಿ ವರುಣ್‌ 11-7, 11-6, 11-5ರಲ್ಲಿ ಜಿಇಎಂನ ಋಷಿಕೇಶ್ ಶೆಟ್ಲೂರ್ ವಿರುದ್ಧ ಜಯ ಗಳಿಸಿದರು. ಸೆಮಿಫೈನಲ್‌ನಲ್ಲಿ ಋಷಿಕೇಶ್, ಚೆಕ್‌ಮೇಟ್‌ನ ತೇಶುಬ್ ದಿನೇಶ್ ವಿರುದ್ಧ 9-11, 11-8, 6-11, 12-10, 12-10ರಲ್ಲಿ, ವರುಣ್, ಎಸ್‌ಬಿಟಿಯ ಅಭಿನವ್ ಮೂರ್ತಿ ವಿರುದ್ಧ 11-6, 11-5, 3-11, 11-9ರಲ್ಲಿ ಜಯ ಗಳಿಸಿದರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ನಿಹಾರಿಕಾ 11-2, 11-7, 6-11, 11-8ರಲ್ಲಿ ಬಿಟಿಟಿಯ ಸಾನ್ವಿ ಮಂದೇಕರ್ ಎದುರು ಗೆಲುವು ದಾಖಲಿಸಿದರು. ಸೆಮಿಫೈನಲ್‌ನಲ್ಲಿ ಸಾನ್ವಿ, ವಿನ್ನರ್ಸ್ ಕ್ಲಬ್‌ನ ಪರ್ಣವಿ ಎದುರು 11-7, 11-9, 11-9ರಲ್ಲಿ ಮತ್ತು ನಿಹಾರಿಕಾ, ಎಂಟಿಟಿಯ ನಹ್ಲಾ ಫಾತಿಮಾ ಎದುರು 11-3, 7-11, 11-13, 11-2, 11-6ರಲ್ಲಿ ಗೆದ್ದರು.

ತೇಶುಭ್‌, ಸಾನ್ವಿ ಜಯಭೇರಿ

ಕೆಡೆಟ್‌ ವಿಭಾಗದಲ್ಲಿ ಚೆಕ್‌ಮೇಟ್‌ನ ತೇಶುಬ್‌ ದಿನೇಶ್ ಮತ್ತು ಬಿಟಿಟಿಎನ ಸಾನ್ವಿ ವಿಶಾಲ್ ಮಂದೇಕರ್ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಜಯಭೇರಿ ಮೊಳಗಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಬಾಲಕರ ವಿಭಾಗದ ಫೈನಲ್‌ನಲ್ಲಿ ತೇಶುಬ್ 13-11, 9-11, 11-6, 11‌-8ರಲ್ಲಿ ಚೆಕ್‌ಮೇಟ್‌ನ ಮೊಹನೀಶ್ ನಂದಿ ಎದುರು ಜಯ ಗಳಿಸಿದರು. ಬಾಲಕಿಯರ ವಿಭಾಗದ ಅಂತಿಮ ಹಣಾಹಣಿಯಲ್ಲಿ ಸಾನ್ವಿ, ಬಿಟಿಟಿನ ಆಯುಷಿ ಬಾಲಕೃಷ್ಣ ಗೋ‌ಡ್ಸೆ ಎದುರು 9-11, 11-7, 11- 7, 4-11, 11-6ರಲ್ಲಿ ಗೆದ್ದರು.

ಬಾಲಕರ ವಿಭಾಗದ ಸೆಮಿಫೈನಲ್‌ನಲ್ಲಿ ಮೊಹನಿಶ್ ನಂದಿ ಎಸ್‌ಕೆಐ ಕ್ಲಬ್‌ನ ಅಥರ್ವ ನವರಂಗೆ ಎದುರು 11-9, 13-11, 11-7ರಲ್ಲಿ ಮತ್ತು ತೇಶುಬ್ ದಿನೇಶ್‌ 11-4, 11-3, 11-4ರಲ್ಲಿ ಆರ್ಯ ಜೈನ್ ಎದುರು ಗೆದ್ದರು.

ಬಾಲಕಿಯರ ವಿಭಾಗದ ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಸಾನ್ವಿ 11-4, 11-4, 11-9ರಲ್ಲಿ ಹಂಸಿಣಿ ಅರುಣ್ ಎದುರು ಮತ್ತು ಆಯುಷಿ, ಬಿಎನ್‌ಎಂನ ವೃಷಾಲಿ ಕಿಣಿ ಎದುರು 11-9, 11-7, 5-11, 8-11, 11-3ರಲ್ಲಿ ಗೆದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು