ಭಾನುವಾರ, ಜನವರಿ 19, 2020
26 °C

ಸೊ ಎದುರು ಸೋತ ಆನಂದ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಯ್ಕ್‌ ಆನ್‌ ಜೀ, ನೆದರ್ಲೆಂಡ್ಸ್ : ಮಾಜಿ ವಿಶ್ವ ಚಾಂಪಿಯನ್‌ ವಿಶ್ವನಾಥನ್ ಆನಂದ್, ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಭಾನುವಾರ ಅಮೆರಿಕದ ವೆಸ್ಲಿ ಸೊ ಎದುರು ಸೋಲನುಭವಿಸಿದರು.

ಮೊದಲ ಸುತ್ತಿನಲ್ಲಿ ‘ಡ್ರಾ’ ಮಾಡಿ ಕೊಂಡಿದ್ದ ಭಾರತದ ಆಟಗಾರ, ಎರ ಡನೇ ಸುತ್ತಿನಲ್ಲಿ ಕಪ್ಪು ಕಾಯಿಗಳನ್ನು ಮುನ್ನಡೆಸಿ ಕೆಲವು ಉತ್ತಮ ನಡೆ ಗಳನ್ನು ಚಲಾಯಿಸಿದರು.  22ನೇ ನಡೆಯಲ್ಲಿ ತಪ್ಪೆಸಗಿದ್ದು ದುಬಾರಿ ಯಾಯಿತು. ಇದರ ಲಾಭ ಪಡೆದ ಸೊ ಕೇವಲ ಮೂರು ನಡೆಗಳ ನಂತರ ಪಂದ್ಯ ಗೆದ್ದರು.

ವಿಶ್ವ ಚಾಂಪಿ ಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌, ಚೀನಾದ ಯು ಯಾಂಗ್ವಿ ಎದುರೂ, ಅನೀಶ್‌ ಗಿರಿ ಅಮೆರಿಕದ ಫ್ಯಾಬಿಯಾನೊ ಕರುವಾನ ಜೊತೆ ಪಾಯಿಂಟ್‌ ಹಂಚಿಕೊಂಡರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು