ಬೆಂಗಳೂರು: ಮಹಾರಾಷ್ಟ್ರದ ಪ್ರೀತಿ ದೇಶಮುಖ್ ಅವರು ಖೇಲೊ ಇಂಡಿಯಾ ಮಹಿಳೆಯರ ರಾಷ್ಟ್ರೀಯ ರ‍್ಯಾಂಕಿಂಗ್ ವೇಟ್‌ಲಿಫ್ಟಿಂಗ್ ಟೂರ್ನಿಯ ಕೊನೆಯ ದಿನ ಚಿನ್ನದ ಪದಕ ಜಯಿಸಿದರು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ +87 ಕೆಜಿ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಅವರು ಒಟ್ಟು 163 ಕೆಜಿ ಭಾರ ಎತ್ತಿದರು. ತಮಿಳುನಾಡಿನ ಮೋಹನ ಪ್ರಿಯಾ (152 ಕೆಜಿ) ಮತ್ತು ಉತ್ತರಾಖಂಡದ ಮೇಘಾ ಚಾಂದ್ (147 ಕೆಜಿ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದರು.
ಸೀನಿಯರ್ ವಿಭಾಗದಲ್ಲಿ ಆರ್‌ಎಸ್‌ಪಿಬಿಯ ಅನ್ನಾ ಮರಿಯಾ ಎಂ.ಟಿ. (210 ಕೆಜಿ) ಚಿನ್ನ ಜಯಿಸಿದರು.
ಒಟ್ಟಾರೆ ಸೀನಿಯರ್ ವಿಭಾಗದಲ್ಲಿ ಆರ್‌ಎಸ್‌ಪಿಬಿ ತಂಡ ಚಾಂಪಿಯನ್ ಎನಿಸಿಕೊಂಡಿತು. ಕರ್ನಾಟಕ ಮೂರನೇ ಸ್ಥಾನ ಗಳಿಸಿತು.
ಜೂನಿಯರ್ ವಿಭಾಗದಲ್ಲಿ ಮಹಾರಾಷ್ಟ್ರ ತಂಡ ಮತ್ತು ಯೂತ್ ವಿಭಾಗದಲ್ಲಿ ಒಡಿಶಾ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.