ಶನಿವಾರ, ಜೂಲೈ 4, 2020
28 °C
ಟೋಕಿಯೊ ಒಲಿಂಪಿಕ್ಸ್‌ ಏಕಕಾಲದಲ್ಲಿ ನಡೆಯುವುದನ್ನು ತಪ್ಪಿಸಲು ಕ್ರಮ

2021ರ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಮರುನಿಗದಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಕ್ವಾಲಾಲಂಪುರ: ಮುಂದಿನ ವರ್ಷದ ಆಗಸ್ಟ್‌ನಲ್ಲಿ ನಿಗದಿಯಾಗಿದ್ದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಅನ್ನು ಮುಂದೂಡಲಾಗಿದೆ. ಟೋಕಿಯೊ ಒಲಿಂಪಿಕ್‌ ಕ್ರೀಡೆಗಳನ್ನು ಮುಂದಿನ ವರ್ಷದ ಆಗಸ್ಟ್‌ಗೆ ಮರುನಿಗದಿ ಮಾಡಿರುವುದು ಇದಕ್ಕೆ ಕಾರಣ.

ಮರು ನಿಗದಿ ಮಾಡಿರುವ ವಿಶ್ವ ಚಾಂಪಿಯನ್‌ಷಿಪ್‌ ಸ್ಪೇನ್‌ನ ಹುಲ್ವಾ ನಗರದಲ್ಲಿ ನವೆಂಬರ್‌ 29 ರಿಂದ ಡಿಸೆಂಬರ್‌ 5ರವರೆಗೆ ನಡೆಯಲಿದೆ ಎಂದು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌– ಎರಡೂ ಏಕಕಾಲದಲ್ಲಿ ನಡೆಯುವುದನ್ನು ತ‍ಪ್ಪಿಸಿ, ಆಟಗಾರರಿಗೆ ಎರಡೂ ಕೂಟಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಡಬ್ಲ್ಯುಎಫ್‌ ಅಧ್ಯಕ್ಷ ಪಾಲ್‌ ಎರಿಕ್‌ ಹೊಯರ್‌ ತಿಳಿಸಿದ್ದಾರೆ.

ಹೊಸ ದಿನಾಂಕ ನಿಗದಿಪಡಿಸಿರುವುದರಿಂದ ಆಟಗಾರರಿಗೂ ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗೆ ಸಿದ್ಧತೆ ನಡೆಸಲು ಸಾಧ್ಯವಾಗಲಿದೆ ಎಂದು ಹೇಳಿಕೆ ತಿಳಿಸಿದೆ.

ಮುಂದಿನ ವರ್ಷದ ಇತರ ಪ್ರಮುಖ ಕೂಟಗಳ ದಿನಾಂಕ ನಿಗದಿಪಡಿಲು ಬಿಡಬ್ಲ್ಯುಎಫ್‌ಗೆ ಇನ್ನೂ ಸಾಧ್ಯವಾಗಿಲ್ಲ. ಒಲಿಂಪಿಕ್ಸ್‌ಗ, ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಪ್ರಕ್ರಿಯೆಯನ್ನು ಮುಂದೆ ಪ್ರಕಟಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಡೆನ್ಮಾರ್ಕ್ ಸರ್ಕಾರ ಜನ ಗುಂಪುಗೂಡದಂತೆ ನಿಧವನ್ನು  ಆಗಸ್ಟ್‌ ಅಂತ್ಯದವರೆಗೆ ಮುಂದುವರಿಸಿದ ಕಾರಣ, ಥಾಮಸ್‌ ಮತ್ತು ಊಬರ್‌ ಕಪ್‌ ಟೂರ್ನಿಗಳ ದಿನಾಂಕ ಬದಲಾಯಿಸಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಯಂತೆ ಇದು ಡೆನ್ಮಾರ್ಕ್‌ನಲ್ಲಿ ಅಕ್ಟೋಬರ್‌ 3 ರಿಂದ 11 ರವರೆಗೆ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು