ಮಂಗಳವಾರ, ಮಾರ್ಚ್ 21, 2023
24 °C

ಟಿಟಿ: ಸೆಮಿಗೆ ಮಣಿಕಾ– ಸತ್ಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೋಹಾ (ಪಿಟಿಐ): ಭಾರತದ ಮಿಶ್ರ ಡಬಲ್ಸ್‌ ಜೋಡಿ ಜಿ.ಸತ್ಯನ್‌ ಮತ್ತು ಮಣಿಕಾ ಬಾತ್ರ ಅವರು ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಕಂಟೆಂಡರ್‌ ಟೇಬಲ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು.

ಗುರುವಾರ ನಡೆದ ಎಂಟರಘಟ್ಟದ ಪಂದ್ಯದಲ್ಲಿ ಭಾರತದ ಜೋಡಿ 3–0 ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಜೋಡಿ ಸ್ಪೇನ್‌ನ ಮರಿಯಾ ಕ್ಸಿಯಾವೊ– ಅಲ್ವಾರೊ ರಾಬ್ಲೆಸ್‌ ಅವರನ್ನು ಮಣಿಸಿತು.

ಹೊಂದಾಣಿಕೆಯ ಆಟವಾಡಿದ ಸತ್ಯನ್‌ ಮತ್ತು ಮಣಿಕಾ 24 ನಿಮಿಷಗಳ ಹಣಾಹಣಿಯನ್ನು 11–9, 11–9, 11–5 ಗೇಮ್‌ಗಳಿಂದ ತಮ್ಮದಾಗಿಸಿಕೊಂಡರು. ಸೆಮಿಫೈನಲ್‌ನಲ್ಲಿ ಅವರು ಕೊರಿಯಾದ ಲಿಮ್ ಜಾಂಗ್‌ಹೂನ್‌– ಶಿನ್‌ ಯುಬಿನ್‌ ಎದುರು ಪೈಪೋಟಿ ನಡೆಸುವರು.

ಮೊದಲ ಗೇಮ್‌ನಲ್ಲಿ ಭಾರತದ ಜೋಡಿ 2–5 ಹಾಗೂ 3–6 ರಲ್ಲಿ ಹಿನ್ನಡೆಯಲ್ಲಿತ್ತು. ಮರುಹೋರಾಟ ನಡಸಿ ಸತತ ಆರು ಪಾಯಿಂಟ್ಸ್‌ ಕಲೆಹಾಕಿ ಗೇಮ್‌ ಗೆದ್ದಿತು. ಎರಡನೇ ಗೇಮ್‌ನಲ್ಲೂ ಪ್ರಬಲ ಪೈಪೋಟಿ ನಡೆಯಿತು. ಮೂರನೇ ಗೇಮ್‌ನಲ್ಲಿ ಸತ್ಯನ್ ಮತ್ತು ಮಣಿಕಾ ಸೊಗಸಾದ ಆಟವಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು