ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತು ಹೊರ ಬಿದ್ದ ಮರ‍್ರೆ

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಫೆಡರರ್‌, ನಡಾಲ್‌ ಶುಭಾರಂಭ
Last Updated 14 ಜನವರಿ 2019, 17:05 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಬ್ರಿಟನ್‌ನ ಆ್ಯಂಡಿ ಮರ‍್ರೆ ಅವರ ಅಭಿಯಾನ ಅಂತ್ಯಗೊಂಡಿದೆ.

ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಮತ್ತು ಸ್ಪೇನ್‌ನ ರಫೆಲ್‌ ನಡಾಲ್‌ ಟೂರ್ನಿಯಲ್ಲಿ ಗೆಲುವಿನ ಮುನ್ನುಡಿ ಬರೆದಿದ್ದಾರೆ.

ಮೆಲ್ಬರ್ನ್‌ ಪಾರ್ಕ್‌ ಅಂಗಳದಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ 22ನೇ ಶ್ರೇಯಾಂಕದ ಆಟಗಾರ ರಾಬರ್ಟೊ ಬಟಿಸ್ಟಾ ಅಗತ್‌ 6–4, 6–4, 6–7, 6–7, 6–2ರಲ್ಲಿ ಮರ‍್ರೆ ಅವರನ್ನು ಸೋಲಿಸಿದರು.

ಸ್ಪೇನ್‌ನ ಆಟಗಾರ ರಾಬರ್ಟೊ ಮೊದಲ ಎರಡು ಸೆಟ್‌ಗಳಲ್ಲಿ ನಿರಾಯಾಸವಾಗಿ ಗೆದ್ದರು. ನಂತರ ಮರ‍್ರೆ ತಿರುಗೇಟು ನೀಡಿದರು. ‘ಟೈ ಬ್ರೇಕರ್‌’ನಲ್ಲಿ ಸತತ ಎರಡು ಸೆಟ್‌ ಜಯಿಸಿ 2–2 ಸಮಬಲಕ್ಕೆ ಕಾರಣರಾದರು. ಆದರೆ ನಿರ್ಣಾಯಕ ಐದನೇ ಸೆಟ್‌ನಲ್ಲಿ ಬ್ರಿಟನ್‌ನ ಆಟಗಾರ ಸಂಪೂರ್ಣವಾಗಿ ಮಂಕಾದರು.

ಹಾಲಿ ಚಾಂಪಿಯನ್‌ ರೋಜರ್‌ ಫೆಡರರ್‌ 6–3, 6–4, 6–4 ನೇರ ಸೆಟ್‌ಗಳಿಂದ ಉಜ್‌ಬೆಕಿಸ್ತಾನದ ಡೆನಿಸ್‌ ಇಸ್ತೋಮಿನ್‌ ಎದುರು ಗೆದ್ದರು.

ಇನ್ನೊಂದು ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕದ ಆಟಗಾರ ನಡಾಲ್‌ 6–4, 6–3, 7–5ರಲ್ಲಿ ಜೇಮ್ಸ್‌ ಡಕ್ವರ್ಥ್‌ ಅವರನ್ನು ಪರಾಭವಗೊಳಿಸಿದರು.

ಇತರ ಪ್ರಮುಖ ಪಂದ್ಯಗಳಲ್ಲಿ ಫರ್ನಾಂಡೊ ವರ್ಡಾಸ್ಕೊ 7–6, 6–3, 6–3ರಲ್ಲಿ ಮಿಯೊಮಿರ್‌ ಕೆಕ್‌ಮೆನೊವಿಚ್‌ ಎದುರೂ, ವಿಕ್ಟರ್‌ ಟ್ರೊಯಿಕಿ 6–1, 1–6, 2–6, 6–1, 6–4ರಲ್ಲಿ ರಾಬರ್ಟೊ ಕಾರ್ಬೆಲ್ಲಸ್‌ ಮೇಲೂ, ಗಾಯೆಲ್‌ ಮೊಂಫಿಲ್ಸ್‌ 6–0, 6–4, 6–0ರಲ್ಲಿ ದಮಿರ್‌ ಜುಮಹರ್‌ ವಿರುದ್ಧವೂ, ಕೆವಿನ್‌ ಆ್ಯಂಡರ್ಸನ್‌ 6–3, 5–7, 6–2, 6–1ರಲ್ಲಿ ಆಡ್ರಿಯನ್‌ ಮನ್ನಾರಿನೊ ಮೇಲೂ, ಆ್ಯಂಡ್ರೆಸ್‌ ಸೆಪ್ಪಿ 6–4, 4–6, 6–4, 6–3ರಲ್ಲಿ ಸ್ಟೀವ್‌ ಜಾನ್ಸನ್‌ ಎದುರೂ, ಗ್ರಿಗರ್‌ ಡಿಮಿಟ್ರೋವ್‌ 4–6, 6–3, 6–1, 6–4ರಲ್ಲಿ ಜಾಂಕೊ ತಿಪ್ಸರೆವಿಚ್‌ ವಿರುದ್ಧವೂ, ಥಾಮಸ್‌ ಬರ್ಡಿಕ್‌ 6–3, 6–0, 7–5ರಲ್ಲಿ ಕೈಲ್‌ ಎಡ್ಮಂಡ್‌ ಮೇಲೂ, ರಾಬಿನ್‌ ಹಾಸ್‌ 7–5, 6–4, 7–5ರಲ್ಲಿ ಗುಯಿಲ್ಲರ್ಮೊ ಲೊ‍ಪೆಜ್‌ ಎದುರೂ, ಡೀಗೊ ಸ್ವಾರ್ಟ್ಜ್‌ಮನ್‌ 6–1, 6–3, 4–6, 6–0ರಲ್ಲಿ ರಾಡಲ್ಫ್‌ ಮೊಲ್ಲೆಕರ್‌ ಮೇಲೂ, ಮರಿನ್‌ ಸಿಲಿಕ್‌ 6–2, 6–4, 7–6ರಲ್ಲಿ ಬರ್ನಾರ್ಡ್‌ ಟಾಮಿಕ್‌ ವಿರುದ್ಧವೂ ಗೆದ್ದರು.

ಶುಭಾರಂಭ ಮಾಡಿದ ಶರಪೋವಾ: ಮಹಿಳಾ ಸಿಂಗಲ್ಸ್‌ನಲ್ಲಿ ಕಣದಲ್ಲಿರುವ ರಷ್ಯಾದ ಮರಿಯಾ ಶರಪೋವಾ ಶುಭಾರಂಭ ಮಾಡಿದರು.

ಮೊದಲ ಸುತ್ತಿನಲ್ಲಿ ಮರಿಯಾ 6–0, 6–0 ನೇರ ಸೆಟ್‌ಗಳಿಂದ ಬ್ರಿಟನ್‌ನ ಹ್ಯಾರಿಯಟ್‌ ಡಾರ್ಟ್‌ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ಬೆಲಿಂದಾ ಬೆನ್‌ಸಿಕ್‌ 6–4, 2–6, 6–3ರಲ್ಲಿ ಕ್ಯಾತರಿನಾ ಸಿನಿಯಾಕೊವಾ ಎದುರೂ, ಕೇಟಿ ಬೌಲ್ಟರ್‌ 6–0, 4–6, 7–6ರಲ್ಲಿ ಏಕ್ತರಿನಾ ಮಕರೋವಾ ಮೇಲೂ, ಆ್ಯಷ್ಲೆಗ್‌ ಬಾರ್ಟಿ 6–2, 6–2ರಲ್ಲಿ ಲುಕ್‌ಸಿಕಾ ಎದುರೂ, ಕ್ಯಾರೋಲಿನಾ ವೋಜ್ನಿಯಾಕಿ 6–3, 6–4ರಲ್ಲಿ ಅಲಿಸನ್‌ ವ್ಯಾನ್‌ ಮೇಲೂ, ಕಿಕಿ ಬರ್ಟೆನ್ಸ್‌ 6–3, 6–3ರಲ್ಲಿ ಅಲಿಸನ್‌ ರಿಸ್ಕೆ ಎದುರೂ, ಏಂಜಲಿಕ್‌ ಕೆರ್ಬರ್‌ 6–2, 6–2ರಲ್ಲಿ ಪೊಲೊನಾ ಹರ್ಕೊಗ್‌ ಮೇಲೂ, ಪೆಟ್ರಾ ಕ್ವಿಟೋವಾ 6–3, 6–2ರಲ್ಲಿ ಮಗ್ದಲೆನಾ ರೈಬರಿಕೋವಾ ವಿರುದ್ಧವೂ ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT