ಬುಧವಾರ, ಜೂನ್ 16, 2021
28 °C

ಪೋರ್ಚೆ ಗ್ರ್ಯಾನ್ ಪ್ರಿ ಟೆನಿಸ್ ಟೂರ್ನಿ: ನಾಲ್ಕರ ಘಟ್ಟಕ್ಕೆ ಆ್ಯಷ್ಲೆ ಬಾರ್ಟಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಸ್ಟುಟ್‌ಗಾರ್ಟ್‌, ಜರ್ಮನಿ: ಅಗ್ರಶ್ರೇಯಾಂಕದ ಆ್ಯಷ್ಲೆ ಬಾರ್ಟಿ ಅವರು ಪೋರ್ಚೆ ಗ್ರ್ಯಾನ್ ಪ್ರಿ ಟೆನಿಸ್ ಟೂರ್ನಿಯ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಅವರು 2-6, 6-1, 7-5ರಿಂದ ಕರೋಲಿನಾ ಪ್ಲಿಸ್ಕೊವಾ ಅವರನ್ನು ಮಣಿಸಿದರು.

ಪಂದ್ಯದಲ್ಲಿ ಜಿದ್ದಾಜಿದ್ದಿ ಪೈಪೋಟಿ ಕಂಡುಬಂದಿತು. ಮೊದಲ ಸೆಟ್‌ ಹಿನ್ನಡೆ ಅನುಭವಿಸಿದ್ದ, ಆಸ್ಟ್ರೇಲಿಯಾದ ಬಾರ್ಟಿ ಎರಡು ಮತ್ತು ಮೂರನೇ ಸೆಟ್‌ಗಳನ್ನು ತಮ್ಮದಾಗಿಸಿಕೊಂಡರು. ನಿರ್ಣಾಯಕ ಸೆಟ್‌ನಲ್ಲಿ ಜೆಕ್ ಗಣರಾಜ್ಯದ ಆಟಗಾರ್ತಿ ಎದುರು ಐದು ಬ್ರೇಕ್ ಪಾಯಿಂಟ್ಸ್ ಗಳಿಸಿದರು.

ಸೆಮಿಫೈನಲ್ ಪಂದ್ಯದಲ್ಲಿ ಬಾರ್ಟಿ ಅವರಿಗೆ ಎಲಿನಾ ಸ್ವಿಟೋಲಿನಾ ಅವರ ಸವಾಲು ಎದುರಾಗಿದೆ. ನಾಲ್ಕನೇ ಶ್ರೇಯಾಂಕ ಪಡೆದಿರುವ, ಉಕ್ರೇನ್‌ನ ಸ್ವಿಟೋಲಿನಾ 6-7, 7-5, 6-2ರಿಂದ ಪೆಟ್ರಾ ಕ್ವಿಟೊವಾ ಅವರನ್ನು ಪರಾಭವಗೊಳಿಸಿ ನಾಲ್ಕರ ಘಟ್ಟ ತಲು‍ಪಿದರು.

ಎರಡನೇ ಶ್ರೇಯಾಂಕದ ಸಿಮೊನಾ ಹಲೆಪ್‌ 6-1, 6-4ರಿಂದ ಏಕಟೆರಿನಾ ಅಲೆಕ್ಸಾಂಡ್ರೊವಾ ವಿರುದ್ಧವೂ, ಅರಿನಾ ಸಬಲೆಂಕಾ 7-5, 4-6, 6-1ರಿಂದ ಅನ್ನಾ ಕೊಂಟಾವೇಟ್‌ ಎದುರು ಜಯಿಸಿ ಸೆಮಿಫೈನಲ್ ಪ್ರವೇಶಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು