ಮಂಗಳವಾರ, ಸೆಪ್ಟೆಂಬರ್ 21, 2021
21 °C

ಬೆರೆಟಿನಿಗೆ ಗಾಯ: ಒಲಿಂಪಿಕ್ಸ್‌ಗೆ ಅಲಭ್ಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮಿಲನ್‌: ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದ ಇಟಲಿಯ ಮಟಿಯೊ ಬೆರೆಟಿನಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದಾರೆ. ಮಾಂಸಖಂಡದಲ್ಲಿ ಸೆಳೆತ ಕಾಣಿಸಿಕೊಂಡಿರುವುದರಿಂದ ಟೋಕಿಯೊಗೆ ಹೋಗುವುದಿಲ್ಲ ಎಂದು ಇಟಾಲಿಯನ್ ಒಲಿಂಪಿಕ್ ಸಮಿತಿ ತಿಳಿಸಿದೆ.

ವಿಶ್ವ ಕ್ರಮಾಂಕದಲ್ಲಿ ಎಂಟನೇ ಸ್ಥಾನದಲ್ಲಿರುವ ಬೆರೆಟಿನಿ ಅವರು ವಿಂಬಲ್ಡನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದ ಇಟಲಿಯ ಮೊದಲ ಆಟಗಾರ ಎನಿಸಿದ್ದರು. ಫೈನಲ್‌ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್‌ ಎದುರು ಸೋತಿದ್ದರು. ಸೆಮಿಫೈನಲ್‌ನಲ್ಲಿ ಆಡುತ್ತಿದ್ದಾಗ ಅವರಿಗೆ ನೋವು ಕಾಣಿಸಿಕೊಂಡಿತ್ತು. 

ಫ್ಯಾಬಿಯೊ ಫಾಗ್ನಿನಿ, ಲೊರೆನ್ಸೊ ಸೊನೆಗೊ, ಲಾರೆನ್ಸೊ ಮುಸೆಟ್ಟಿ, ಸಾರಾ ಎರಾನಿ, ಜಾಸ್ಮಿನ್ ಪೌಲೊನಿ ಮತ್ತು ಕಮಿಲ ಜಾರ್ಜಿ ಅವರನ್ನು ಒಳಗೊಂಡ ತಂಡದಲ್ಲಿ ಬೆರೆಟಿನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು