ಶನಿವಾರ, ಆಗಸ್ಟ್ 24, 2019
23 °C
ಮಾಂಟ್ರಿಯಲ್‌ ಮಾಸ್ಟರ್ಸ್‌ ಟೆನಿಸ್‌ : ನಾಲ್ಕರ ಘಟ್ಟಕ್ಕೆ ನಡಾಲ್‌

ಟೆನಿಸ್‌: ಸೆಮಿಫೈನಲ್‌ಗೆ ಬೋಪಣ್ಣ- ಶಪಾವಲೊವ್‌ ಜೋಡಿ

Published:
Updated:
Prajavani

ಮಾಂಟ್ರಿಯಲ್‌ (ಪಿಟಿಐ): ಭಾರತದ ರೋಹನ್‌ ಬೋಪಣ್ಣ ಹಾಗೂ ಸಹ ಆಟಗಾರ ಕೆನಡಾದ ಡೆನಿಸ್‌ ಶಪಾವಲೊವ್‌ ಅವರು ಮಾಂಟ್ರಿಯಲ್‌ ಟೆನಿಸ್‌ ಟೂರ್ನಿಯ ಡಬಲ್ಸ್ ಸೆಮಿಫೈನಲ್‌ಗೆ ಕಾಲಿಟ್ಟರು. ಎದುರಾಳಿಗಳಾದ ಬೆನೊಯಿಟ್‌ ಪೇರ್‌ ಹಾಗೂ ಸ್ಟ್ಯಾನ್‌ ವಾವ್ರಿಂಕಾ ಅವರಿಂದ ಅವರು ವಾಕ್‌ಓವರ್‌ ಪಡೆದರು.

ಸೆಮಿಫೈನಲ್‌ ಹಣಾಹಣಿಯಲ್ಲಿ ಬೋಪಣ್ಣ ಹಾಗೂ ಶಪಾವಲೊವ್‌ ಅವರು ಡಚ್‌ ಆಟಗಾರರಾದ ರಾಬಿನ್‌ ಹಾಸ್‌ ಹಾಗೂ ವೇಸ್ಲಿ ಕೂಲೊಫ್‌ ಅವರನ್ನು ಎದುರಿಸುವರು.

16ರ ಘಟ್ಟದ ಪಂದ್ಯದಲ್ಲಿ ಭಾರತ–ಕೆನಡಾ ಜೋಡಿಯು ಕೈಲ್‌ ಎಡ್ಮಂಡ್‌ ಹಾಗೂ ಟೇಲರ್‌ ಫ್ರಿಟ್ಜ್‌ ಅವರನ್ನು ಮಣಿಸಿತ್ತು.

ನಡಾಲ್‌ ಜಯಭೇರಿ: ಮೊದಲ ಸುತ್ತು ಹಿನ್ನಡೆ ಅನುಭವಿಸಿದರೂ ಕುಗ್ಗದ ರಫೆಲ್‌ ನಡಾಲ್ ಇಟಲಿಯ ಫ್ಯಾಬಿಯೊ ಫಾಗ್ನಿನಿ ವಿರುದ್ಧ ಜಯಿಸಿದರು.

ಪುರುಷರ ಸಿಂಗಲ್ಸ್ ಸೆಮಿಫೈನಲ್‌ಗೆ ಕಾಲಿಟ್ಟರು. 2–6, 6–1, 6–2ರಿಂದ ಅವರು ಗೆಲುವಿನ ನಗೆ ಬೀರಿದರು.

ವರ್ಷದ ಹಿಂದೆ ಮಾಂಟ್ರಿಯಲ್‌ನಲ್ಲಿ ನಾಲ್ಕನೇ ಪ್ರಶಸ್ತಿ ಜಯಿಸಿದ್ದರು ನಡಾಲ್‌.

ಆದರೆ ಮಾಂಟೆ ಕಾರ್ಲೊ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಫಾಗ್ನಿನಿ ಎದುರು ಸೋಲು ಕಂಡಿದ್ದರು.

 

Post Comments (+)