ಮಂಗಳವಾರ, ಮಾರ್ಚ್ 21, 2023
23 °C

ಸುಳ್ಳು ಮಾಹಿತಿ ಪ್ರಕರಣ: ಬೆಕರ್‌ ಬಿಡುಗಡೆ, ಗಡಿಪಾರು ಸಾಧ್ಯತೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಆಸ್ತಿ ವಿವರ ಮುಚ್ಚಿಟ್ಟು ದಿವಾಳಿಯಾಗಿರುವುದಾಗಿ ಸುಳ್ಳು ಮಾಹಿತಿ ನೀಡಿದ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಟೆನಿಸ್‌ ಆಟಗಾರ ಬೋರಿಸ್‌ ಬೆಕರ್‌ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಬ್ರಿಟನ್‌ನ ಮಾಧ್ಯಮಗಳು ವರದಿ ಮಾಡಿವೆ.

ಅವರನ್ನು ಬ್ರಿಟನ್‌ನಿಂದ ಗಡಿಪಾರು ಮಾಡಲಾಗುವುದು ಎಂದು ಹೇಳಿದೆ. ಬೆಕರ್‌ ಅವರು ಸಾಲ ಮರುಪಾವತಿ ಮಾಡುವುದನ್ನು ತಪ್ಪಿಸಲು ಸುಮಾರು ₹ 25 ಕೋಟಿ ಮೊತ್ತದ ಆಸ್ತಿಯ ವಿವರ ಮುಚ್ಚಿಟ್ಟಿದ್ದರು. ಏಪ್ರಿಲ್‌ನಲ್ಲಿ ಅವರು ಎರಡೂವರೆ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. 

ಆರು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಜಯಿಸಿರುವ 55 ವರ್ಷದ ಬೆಕರ್‌ ಅವರು 2012 ರಿಂದ ಬ್ರಿಟನ್‌ನಲ್ಲಿ ವಾಸವಾಗಿದ್ದಾರೆ. ತಾನು ದಿವಾಳಿಯಾಗಿರುವುದಾಗಿ ಅವರು 2017 ರಲ್ಲಿ ಘೋಷಿಸಿದ್ದರು.br

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು