ಗುರುವಾರ , ಡಿಸೆಂಬರ್ 5, 2019
20 °C
ಡೇವಿಸ್‌ ಕಪ್‌

ಭದ್ರತೆ ಬಗ್ಗೆ ಭಾರತ ಕಳವಳ: ಪಾಕಿಸ್ತಾನದಿಂದ ಕಜಕಿಸ್ತಾನಕ್ಕೆ ಪಂದ್ಯ ಶಿಫ್ಟ್

Published:
Updated:

ನವದಹೆಲಿ: ಡೇವಿಸ್‌ ಕಪ್‌ ಪಂದ್ಯಾವಳಿಯ ಭಾರತ–ಪಾಕಿಸ್ತಾನ ಪಂದ್ಯವನ್ನು ಆಯೋಜಿಸಲು ಕಜಕಿಸ್ತಾನ ರಾಜಧಾನಿ ನೂರ್‌–ಸುಲ್ತಾನ್‌ ನಗರವನ್ನು ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌(ಐಟಿಎಫ್‌) ಆಯ್ಕೆ ಮಾಡಿದೆ.

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಸುರಕ್ಷತೆ ಹಾಗೂ ಭದ್ರತೆಯ ಕಾರಣದಿಂದಾಗಿ ತಟಸ್ಥ ಸ್ಥಳಕ್ಕೆ ವರ್ಗಾಯಿಸಲು ಐಟಿಎಫ್‌ನ ಸ್ವತಂತ್ರ ಮಂಡಳಿ ನವೆಂಬರ್ 4ರಂದು ನಡೆದ ಸಭೆಯಲ್ಲಿ ನಿರ್ಧರಿಸಿತ್ತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪಾಕಿಸ್ತಾನದಲ್ಲೇ ಪಂದ್ಯ ಆಯೋಜಿಸುವಂತೆ ಮನವಿ ಮಾಡಿದ್ದ ಪಾಕಿಸ್ತಾನ ಟೆನಿಸ್‌ ಫೆಡರೇಷನ್‌(ಪಿಟಿಎಫ್‌), ‘ಭಾರತದ ಯಾತ್ರಾರ್ಥಿಗಳು ಯಾವುದೇ ಭಯವಿಲ್ಲದೆ ಪಾಕಿಸ್ತಾನಕ್ಕೆ ಬರಬಹುದು ಎಂದಾದ ಮೇಲೆ, ಇಸ್ಲಾಮಾಬಾದ್‌ನಲ್ಲಿ ನಡೆಯುವ ಪಂದ್ಯದಲ್ಲಿ ಆಡಲು ಭಾರತ ತಂಡಕ್ಕೇಕೆ ಸಾಧ್ಯವಿಲ್ಲ’ ಎಂದು ವಾದಿಸಿತ್ತು.

ಇದನ್ನೂ ಓದಿ: ತಟಸ್ಥ ಸ್ಥಳಕ್ಕೆ ಡೇವಿಸ್‌ ಕಪ್‌ ಪಂದ್ಯ ಸ್ಥಳಾಂತರ: ಪಾಕ್‌ ನಿರ್ಧಾರ ಇಂದು

‘ಪಂದ್ಯವು ನೂರ್‌–ಸುಲ್ತಾನ್‌ನಲ್ಲಿ ನಡೆಯಲಿದೆ ಎಂಬುದಾಗಿ ಐಟಿಎಫ್‌ ನಮಗೆ ತಿಳಿಸಿದೆ. ಪಿಟಿಎಫ್‌ ಮನವಿ ತಿರಸ್ಕರಿಸಲಾಗಿದೆಯೇ ಎಂಬುದು ಗೊತ್ತಿಲ್ಲ. ತಡರಾತ್ರಿ ನಡೆಸಿದ ಸಂವಹನದಲ್ಲಿ ಪಂದ್ಯ ನಿಗದಿಯಾಗಿರುವ ಹೊಸ ಸ್ಥಳದ ಬಗ್ಗೆ ಮಾತ್ರವೇ ತಿಳಿಸಲಾಯಿತು’ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ಸಿಇಒ ಅಕುಓರಿ ಬಿಶ್ವದೀಪ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಡೇವಿಸ್‌ ಕಪ್‌ ಸ್ಥಳಾಂತರ?

ಪಂದ್ಯವು ಸೆಪ್ಟೆಂಬರ್‌ನಲ್ಲಿಯೇ ನಡೆಯಬೇಕಿತ್ತು. ಆದರೆ, ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ 370ನೇ ವಿಧಿಯನ್ನು ಭಾರತ ಆಗಸ್ಟ್‌ನಲ್ಲಿ ರದ್ದು ಮಾಡಿತ್ತು. ಅದಾದ ಬಳಿಕ ಪಾಕ್‌ ಜೊತೆಗಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಹಳಸಿತ್ತು. ಹೀಗಾಗಿ ಭಾರತವು ಸುರಕ್ಷತೆ ಸಂಬಂಧ ಕಳವಳ ವ್ಯಕ್ತಪಡಿಸಿತ್ತು. ಹೀಗಾಗಿ ಪಂದ್ಯವನ್ನು ನವೆಂಬರ್‌ 29–30ಕ್ಕೆ ಮುಂದೂಡಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು