ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಪಿ ಟೂರ್ನಿ: ಜೊಕೊವಿಚ್‌ಗೆ 90ನೇ ಕಿರೀಟ

Last Updated 9 ಅಕ್ಟೋಬರ್ 2022, 14:14 IST
ಅಕ್ಷರ ಗಾತ್ರ

ಅಸ್ತಾನ, ಕಜಕಸ್ತಾನ (ಎಎಫ್‌ಪಿ): ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಅಸ್ತಾನದಲ್ಲಿ ನಡೆದ ಎಟಿಪಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ, ವೃತ್ತಿ ಜೀವನದ 90ನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.

ಭಾನುವಾರ ನಡೆದ ಫೈನಲ್‌ನಲ್ಲಿ 35 ವರ್ಷದ ಜೊಕೊವಿಚ್ 6–3, 6–4 ರಲ್ಲಿ ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಾಸ್‌ ವಿರುದ್ಧ ಜಯಿಸಿದರು. ಇಲ್ಲಿ ಗೆದ್ದ ಕಾರಣ ಅವರು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಎಟಿಪಿ ಫೈನಲ್ಸ್‌ನಲ್ಲಿ ಆಡುವ ಅರ್ಹತೆ ಪಡೆದರು.

ಜೊಕೊವಿಚ್‌ಗೆ ದೊರೆತ ಸತತ 9ನೇ ಗೆಲುವು ಇದು. ಕಳೆದ ವಾರ ಟೆಲ್‌ ಅವೀವ್‌ನಲ್ಲಿ ನಡೆದಿದ್ದ ಎಟಿಪಿ ಟೂರ್ನಿಯಲ್ಲಿ ಅವರು ಚಾಂಪಿಯನ್ ಆಗಿದ್ದರು.

ಜುಲೈನಲ್ಲಿ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಜಯಿಸಿದ್ದ ಜೊಕೊವಿಚ್‌, ಕೋವಿಡ್‌ ಲಸಿಕೆ ಪಡೆಯದ ಕಾರಣ ಅಮೆರಿಕ ಓಪನ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು. ರೋಜರ್‌ ಫೆಡರರ್‌ ಅವರ ವಿದಾಯ ಟೂರ್ನಿ ಲೇವರ್‌ ಕಪ್‌ನಲ್ಲಿ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT