ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಆಸ್ಟ್ರೇಲಿಯಾ ಓಪನ್ ಬಳಿಕ ಕರೋಲಿನಾ ವಿದಾಯ

Last Updated 7 ಡಿಸೆಂಬರ್ 2019, 12:22 IST
ಅಕ್ಷರ ಗಾತ್ರ

ಪ್ಯಾರಿಸ್: ಡೆನ್ಮಾರ್ಕ್‌ನಮಾಜಿ ಅಗ್ರ ಶ್ರೇಯಾಂಕಿತ ಆಟಗಾರ್ತಿಕರೋಲಿನಾ ವಾಜ್ನಿಯಾಕಿ ಮುಂದಿನ ತಿಂಗಳು ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್‌ ಬಳಿಕ ಟೆನಿಸ್‌ ಬದುಕಿಗೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ.

ತಮ್ಮ 15ನೇ ವಯಸ್ಸಿನಲ್ಲಿವೃತ್ತಿಪರ ಟೆನಿಸ್‌ಗೆ ಕಾಲಿಟ್ಟ ಕರೋಲಿನಾ, 2010ರಲ್ಲಿ ಎಟಿಪಿ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು. 71 ವಾರಗಳ ಕಾಲ ಅಗ್ರಸ್ಥಾನ ಕಾಯ್ದುಕೊಂಡಿದ್ದ ಕರೋಲಿನಾ, 2017ರಲ್ಲಿ ಸಿಂಗಾಪುರ ಒಪನ್‌ ಸೇರಿ ಒಟ್ಟು 30 ಡಬ್ಲುಟಿಎ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ಮೂರು ಬಾರಿ ಗ್ರಾಂಡ್‌ ಸ್ಲಾಮ್ ಫೈನಲ್‌ ತಲುಪಿರುವ 29 ವರ್ಷದ ಈ ಆಟಗಾರ್ತಿ ಒಮ್ಮೆ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ.

‘ಅಂಗಳದಲ್ಲಿ ನನ್ನ ಕನಸುಗಳನ್ನೆಲ್ಲ ಸಾಕಾರಗೊಳಿಸಿಕೊಂಡಿದ್ದೇನೆ’ ಎಂದಿರುವ ಅವರು, ಇದು ನಾನು ವಿದಾಯ ಹೇಳುವ ಸಮಯ ಎಂದು ಹೇಳಿಕೊಂಡಿದ್ದಾರೆ.

ಸದ್ಯ 37ನೇ ಕ್ರಮಾಂಕದಲ್ಲಿರುವ ಕರೋಲಿನಾ ಪತಿ ಹಾಗೂ ಬಾಸ್ಕೆಟ್‌ಬಾಲ್‌ ಆಟಗಾರಡೇವಿಡ್‌ ಲೀ ಜೊತೆ ಸೇರಿ ಅಥ್ಲೀಟ್‌ಗಳ ಆರೋಗ್ಯಕ್ಕೆ ಸಂಬಂಧಿಸಿದ ಅಭಿಯಾನದಲ್ಲಿ ಪಾಲ್ಗೊಳ್ಳುವುದಾಗಿ ಮತ್ತು ಕುಟುಂಬದತ್ತ ಚಿತ್ತ ಹರಿಸುವುದಾಗಿ ಹೇಳಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಓಪನ್‌ ಟೂರ್ನಿ ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಜನವರಿ 14ರಿಂದ ಆರಂಭವಾಗಲಿದೆ. ಇದು ಕರೋಲಿನಾ ಪಾಲಿಗೆ ಕೊನೇಯ ವೃತ್ತಿಪರ ಟೆನಿಸ್‌ ಕೂಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT