ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯನ್‌, ಶ್ರೀಜಾ ಅಕುಲಾಗೆ ಬಡ್ತಿ

Published 26 ಮಾರ್ಚ್ 2024, 22:33 IST
Last Updated 26 ಮಾರ್ಚ್ 2024, 22:33 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅನುಭವಿ ಟೇಬಲ್ ಟೆನಿಸ್ ಆಟಗಾರ ಜಿ. ಸತ್ಯನ್ ಅವರು ಮಂಗಳವಾರ ಪ್ರಕಟಗೊಂಡ ಐಟಿಟಿಎಫ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ 43 ಸ್ಥಾನಗಳ ಬಡ್ತಿಯೊಂದಿಗೆ 60ನೇ ಸ್ಥಾನಕ್ಕೆ ತಲುಪಿದ್ದಾರೆ.

ವೃತ್ತಿಜೀವನದಲ್ಲಿ 24ನೇ ರ‍್ಯಾಂಕಿಂಗ್‌ ಪಡೆದಿದ್ದ 31 ವರ್ಷದ ಸತ್ಯನ್‌ ಅವರು ಈಚೆಗೆ ಟಾಪ್‌ 100 ಪಟ್ಟಿಯಿಂದ ಹೊರಬಿದ್ದಿದ್ದರು. ಬೇರೂತ್‌ನಲ್ಲಿ ಕಳೆದ ವಾರ ನಡೆದ ಡಬ್ಲ್ಯುಟಿಟಿ ಫೀಡರ್‌ ಸರಣಿಯ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಟ್ರೋಫಿ ಗೆದ್ದುಕೊಂಡ ಸತ್ಯನ್‌, 125 ಅಂಕಗಳನ್ನು ಸಂಪಾದಿಸಿ ರ‍್ಯಾಂಕಿಂಗ್‌ ಸುಧಾರಿಸಿಕೊಂಡಿದ್ದಾರೆ.

ಕಳೆದ ವಾರ ಡಬ್ಲ್ಯುಟಿಟಿ ಫೀಟರ್‌ ಸರಣಿಯ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್‌ ಕಿರೀಟ ಮುಡಿಗೇರಿಸಿಕೊಂಡ ಶ್ರೀಜಾ ಅಕುಲಾ 40ನೇ ಸ್ಥಾನಕ್ಕೆ ಏರಿದ್ದಾರೆ. ಇದು ಅವರ ಜೀವನಶ್ರೇಷ್ಠ ಸಾಧನೆಯಾಗಿದೆ.

41 ವರ್ಷದ ಶರತ್‌ ಕಮಲ್‌ ಭಾರತದ ಪರ ಅಗ್ರ ಕ್ರಮಾಂಕ ಹೊಂದಿದ್ದಾರೆ. 88ನೇ ರ‍್ಯಾಂಕ್‌ನಲ್ಲಿದ್ದ ಅವರು ಕಳೆದ ವಾರವಷ್ಟೇ 34ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದರು. ಇದೀಗ 35ನೇ ಸ್ಥಾನಕ್ಕೆ ಜಾರಿದ್ದಾರೆ.

ಡಬ್ಲ್ಯುಟಿಟಿ ಫೀಡರ್‌ನಲ್ಲಿ ಪುರುಷರ ಡಬಲ್ಸ್‌ ಫೈನಲ್‌ಗೆ ತಲುಪಿದ್ದ ಮಾನವ್ ಠಕ್ಕರ್‌ 11 ಸ್ಥಾನ ಮೇಲೇರಿ 63ನೇ ಸ್ಥಾನಕ್ಕೆ ತಲುಪಿದ್ದರೆ, ಹರ್ಮೀತ್ ದೇಸಾಯಿ ಎರಡು ಸ್ಥಾನ ಕುಸಿದು 67ನೇ ಸ್ಥಾನದಲ್ಲಿದ್ದಾರೆ.

ಮಣಿಕಾ ಬಾತ್ರಾ ಮಹಿಳೆಯರ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ 38ನೇ ಸ್ಥಾನ ಕಾಯ್ದುಕೊಂಡರೆ, ಕರ್ನಾಟಕದ ಅರ್ಚನಾ ಕಾಮತ್ 13 ಸ್ಥಾನ ಮೇಲೇರಿ 99ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ.

ಭಾರತದ ಮಹಿಳಾ ಮತ್ತು ಪುರುಷರ ತಂಡಗಳು ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಪಡೆದಿವೆ.

ಪುರುಷ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ತಲಾ ಇಬ್ಬರಿಗೆ ಅವಕಾಶವಿದ್ದು, ಮೇ 16ರ ಅವಧಿಯ ರ‍್ಯಾಂಕಿಂಗ್‌ ಆಧರಿಸಿ ಭಾರತ ಟೇಬಲ್ ಟೆನಿಸ್ ಫೆಡರೇಷನ್ ಇಬ್ಬರನ್ನು ಆಯ್ಕೆ ಮಾಡಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT