ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 17ರಿಂದ ಮೇ 31ರವರೆಗೆ ಟೆನಿಸ್ ಟೂರ್ನಿಗಳನ್ನು ಸ್ಥಗಿತಗೊಳಿಸಲು ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಬುಧವಾರ ನಿರ್ಧರಿಸಿದೆ.

‘ಕೆಎಸ್‌ಎಲ್‌ಟಿಎಯಲ್ಲಿ ಆಟಗಾರರ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಆಟಗಾರರ ಆರೋಗ್ಯದ ಕುರಿತು ನಾವು ಅಪಾಯವನ್ನು ಮೈಮೇಲೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಸದ್ಯ ನಮ್ಮ ಸಂಸ್ಥೆ ಹಾಗೂಎಐಟಿಎ ಸಹಯೋಗದಲ್ಲಿ ಆಯೋಜಿಸಿದ್ದ ಎಲ್ಲ ಟೂರ್ನಿಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ‘ ಎಂದು ಕೆಎಸ್‌ಎಲ್‌ಟಿಎ ಗೌರವ ಕಾರ್ಯದರ್ಶಿ ಸುನಿಲ್ ಯಜಮಾನ್ ತಿಳಿಸಿದ್ದಾರೆ.

‘ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ತರಬೇತಿ ಹಾಗೂ ಅಭ್ಯಾಸ ಮುಂದುವರಿಯಲಿವೆ‘ ಎಂದು ಸುನಿಲ್ ಹೇಳಿದರು.

ಯಾವುದೇ ಖಾಸಗಿ ಟೂರ್ನಿಗಳನ್ನು ಆಯೋಜಿಸದಂತೆ ಅಕಾಡೆಮಿಗಳು ಹಾಗೂ ಕೋಚ್‌ಗಳಿಗೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.