ಬುಧವಾರ, ಸೆಪ್ಟೆಂಬರ್ 23, 2020
26 °C

ಅಮೆರಿಕ ಓಪನ್; ಎಂಟರ ಘಟ್ಟಕ್ಕೆ ಬೋಪಣ್ಣ ಜೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್: ಕನ್ನಡಿಗ ರೋಹನ್ ಬೋಪಣ್ಣ ಮತ್ತು ಕೆನಡಾದ ಜೊತೆಗಾರ ಡೆನಿಸ್ ಶಪೊವಲೊವ್ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

ಶನಿವಾರ ರಾತ್ರಿ ನಡೆದ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಬೋಪಣ್ಣ ಜೋಡಿಯು 4–6, 6–4, 6–3 ರಿಂದ ಜರ್ಮನಿಯ ಕೆವಿನ್ ಕ್ರಾವಿಜ್ ಮತ್ತು ಆ್ಯಂಡ್ರೆಸ್ ಮೀಸ್ ವಿರುದ್ಧ ಜಯಭೇರಿ ಬಾರಿಸಿತು.

ಎಂಟರ ಘಟ್ಟದ ಪಂದ್ಯದಲ್ಲಿ ಬೋಪಣ್ಣ ಮತ್ತು ಡೆನಿಸ್ ಅವರು ಡಚ್‌ –ರೊಮೆನಿಯನ್ ಜೋಡಿ ಜೀಲ್ ಜುಲಿಯನ್ ರೋಜರ್ ಹಾಗೂ ಹೊರಿಯಾ ಟೆಕ್ಯೂ ಅವರನ್ನು ಎದುರಿಸಲಿದ್ದಾರೆ.

ಇಡೀ ಟೂರ್ನಿಯಲ್ಲಿ ಬೋಪಣ್ಣ ಒಬ್ಬರೇ ಹೋರಾಟದಲ್ಲಿ  ಉಳಿದಿರುವ  ಭಾರತದ ಆಟಗಾರನಾಗಿದ್ದಾರೆ. ಸಿಂಗಲ್ಸ್‌ನಲ್ಲಿ ಸುಮಿತ್ ಈಗಾಗಲೇ ಹೊರಬಿದ್ದಿದ್ದಾರೆ. ಸುಮಿತ್ ಅವರು ವಿಶ್ವದ ಮೂರನೇ ಶ್ರೇಯಾಂಕದ ಆಟಗಾರ ಆಸ್ಟ್ರೀಯಾದ ಡಾಮ್ನಿಕ್ ಥೀಮ್ ವಿರುದ್ಧ ಸೋತಿದ್ದರು.

ಮ್ಲೇಡೆನೊವಿಚ್‌ಗೆ ಕ್ವಾರಂಟೈನ್

ಮಹಿಳಾ ಡಬಲ್ಸ್‌ ಆಟಗಾರ್ತಿ, ಫ್ರಾನ್ಸ್‌ ನ  ಕ್ರಿಸ್ಟಿನಾ ಮ್ಲೆಡೆನೊವಿಚ್ ಅವರಿಗೆ ಕ್ವಾರಂಟೈನ್ ಗೆ ತೆರಳಲು ನೋಟಿಸ್ ನೀಡಲಾಗಿದೆ. ಇದರಿಂದಾಗಿ ಅವರು ಅಮೆರಿಕ ಓಪನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು