ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ಞೇಶ್‌ಗೆ ಮುನ್ನಡೆ; ನಗಾಲ್‌ ನಿರ್ಗಮನ

ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿಯ ಅರ್ಹತಾ ಪಂದ್ಯಗಳು
Last Updated 21 ಸೆಪ್ಟೆಂಬರ್ 2020, 14:33 IST
ಅಕ್ಷರ ಗಾತ್ರ

ಪ್ಯಾರಿಸ್‌: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಫ್ರೆಂಚ್ ಓಪನ್‌ ಟೆನಿಸ್ ಅರ್ಹತಾ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದರು. ದೇಶದ ಇನ್ನೋರ್ವ ಅಗ್ರಕ್ರಮಾಂಕದ ಆಟಗಾರ ಸುಮಿತ್‌ ನಗಾಲ್‌ ಅವರು ಟೂರ್ನಿಯಿಂದ ಹೊರಬಿದ್ದರು.

16ನೇ ಶ್ರೇಯಾಂಕ ಪಡೆದಿದ್ದ ನಗಾಲ್‌ ಅವರು 6–7, 5–7ರಿಂದ ಜರ್ಮನಿಯ ಅನುಭವಿ ಆಟಗಾರ ಡಸ್ಟಿನ್‌ ಬ್ರೌನ್‌ ಎದುರು ಸೋತರು. 47 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು. ಇತ್ತೀಚೆಗೆ ಕೊನೆಗೊಂಡ ಅಮೆರಿಕ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಗೆಲ್ಲುವ ಮೂಲಕ ನಗಾಲ್‌ ಅವರು ಏಳು ವರ್ಷಗಳ ಬಳಿಕ ಗ್ರ್ಯಾಂಡ್‌ಸ್ಲಾಮ್‌ ಪಂದ್ಯವೊಂದನ್ನು ಗೆದ್ದ ಭಾರತದ ಆಟಗಾರ ಎನಿಸಿಕೊಂಡಿದ್ದರು.

ಪಂದ್ಯದ ಎರಡನೇ ಸೆಟ್‌ನಲ್ಲಿ ನಗಾಲ್‌ ಅವರಿಗೆ ಉತ್ತಮ ಅವಕಾಶವಿತ್ತು. ಆರಂಭದಲ್ಲಿ 3–0 ಮುನ್ನಡೆಯಲ್ಲಿದ್ದರು. ಆದರೆ ಆ ಬಳಿಕ ಬ್ರೌನ್ ಪಾರಮ್ಯ ಮೆರೆದರು.

ಭಾರತದ ಎರಡನೇ ಕ್ರಮಾಂಕದ ಸಿಂಗಲ್ಸ್‌ ವಿಭಾಗದ ಆಟಗಾರ ಪ್ರಜ್ಞೇಶ್ ಅವರು 6–3, 6–1ರಿಂದ ಟರ್ಕಿಯ ಸೆಮ್‌ ಇಲ್‌ಕೆಲ್‌ ಅವರ ಸವಾಲನ್ನು ಮೀರಿದರು.

ಅರ್ಹತಾ ಟೂರ್ನಿಯಲ್ಲಿರುವ ಭಾರತದ ಇನ್ನೋರ್ವ ಆಟಗಾರ ರಾಮಕುಮಾರ್‌ ರಾಮನಾಥನ್ ಅವರು ಸ್ಥಳೀಯ ಆಟಗಾರ ತ್ರಿಸ್ಟಾನ್‌ ಲ್ಯಾಮಸೈನ್‌ ಎದುರು ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT