ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

US Open 2023 Men's Doubles: ಬೋಪಣ್ಣ–ಎಬ್ಡೆನ್ ‘ರನ್ನರ್‌ ಅಪ್’

Published 9 ಸೆಪ್ಟೆಂಬರ್ 2023, 18:10 IST
Last Updated 9 ಸೆಪ್ಟೆಂಬರ್ 2023, 18:10 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಭಾರತದ ರೋಹನ್‌ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೋಡಿ ಅಮೆರಿಕ ಓಪನ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ನಿರಾಸೆ ಅನುಭವಿಸಿ ‘ರನ್ನರ್‌ ಅಪ್’ ಆಯಿತು.

ಶುಕ್ರವಾರ ನಡೆದ ಫೈನಲ್‌ನಲ್ಲಿ ಅಮೆರಿಕದ ರಾಜೀವ್‌ ರಾಮ್‌ ಮತ್ತು ಬ್ರಿಟನ್‌ನ ಜೋ ಸ್ಯಾಲಿಸ್‌ಬರಿ ಜೋಡಿ 2-6, 6-3, 6-4 ರಿಂದ ಗೆದ್ದು ಚಾಂಪಿಯನ್‌ ಆಯಿತು.

ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪುರುಷರ ಡಬಲ್ಸ್‌ ಪ್ರಶಸ್ತಿ ಗೆಲ್ಲಬೇಕೆಂಬ ಕರ್ನಾಟಕದ ಆಟಗಾರನ ಕನಸು ಕೈಗೂಡಲಿಲ್ಲ. ಬೋಪಣ್ಣ 2010 ರಲ್ಲಿ ಇದೇ ಟೂರ್ನಿಯಲ್ಲಿ ಐಸಾಮ್‌ ಉಲ್‌ ಹಕ್‌ ಖುರೇಷಿ ಜತೆ ಫೈನಲ್‌ ಪ್ರವೇಶಿಸಿ ‘ರನ್ನರ್‌ ಅಪ್‌’ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT