ಮಂಗಳವಾರ, ಏಪ್ರಿಲ್ 13, 2021
24 °C
ಬಿಲ್ಲಿ ಜೀನ್ ಕಿಂಗ್ ಕಪ್ ವಿಶ್ವ ಗುಂಪು ಪ್ಲೇ ಆಫ್ಸ್ ಟೆನಿಸ್

ಬಿಲ್ಲಿ ಜೀನ್ ಕಿಂಗ್ ಕಪ್‌: ಭಾರತ ತಂಡದಲ್ಲಿ ಸಾನಿಯಾ, ಅಂಕಿತಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಾನಿಯಾ ಮಿರ್ಜಾ ಹಾಗೂ ಅಂಕಿತಾ ರೈನಾ ಅವರು ಬಿಲ್ಲಿ ಜೀನ್ ಕಿಂಗ್ ಕಪ್ ವಿಶ್ವ ಗುಂಪು ಟೆನಿಸ್ ಪ್ಲೇ ಆಫ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಲಾಟ್ವಿಯಾ ಎದುರು ಮುಂದಿನ ತಿಂಗಳು ನಡೆಯುವ ಈ ಪಂದ್ಯಕ್ಕೆ ಐದು ಮಂದಿಯ ತಂಡವನ್ನು ಅಖಿಲ ಭಾರತ ಟೆನಿಸ್ ಸಂಸ್ಥೆಯು ಮಂಗಳವಾರ ಪ್ರಕಟಿಸಿದೆ.

ಕರ್ಮಾನ್ ಕೌರ್ ಥಂಡಿ, ಯುವ ಪ್ರತಿಭೆ ಜೀಲ್ ದೇಸಾಯಿ ಹಾಗೂ ಋತುಜಾ ಭೋಸ್ಲೆ ತಂಡದಲ್ಲಿರುವ ಇನ್ನುಳಿದ ಆಟಗಾರ್ತಿಯರು. ಮಂಗಳವಾರ ನಡೆದ ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ಆಯ್ಕೆ ಸಮಿತಿಯ ವರ್ಚುವಲ್ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ವಿಶಾಲ್ ಉಪ್ಪಳ ಅವರು ತಂಡದ ನಾಯಕರಾಗಿದ್ದಾರೆ. ಹೋದ ವರ್ಷ ತಂಡದಲ್ಲಿದ್ದ ರಿಯಾ ಭಾಟಿಯಾ ಅವರನ್ನು ಕಾಯ್ದಿರಿಸಿದ ಆಟಗಾರ್ತಿಯಾಗಿ ಆಯ್ಕೆ ಮಾಡಲಾಗಿದೆ. ಎರಡು ದಿನಗಳ ಪಂದ್ಯವು ಏಪ್ರಿಲ್ 16ರಿಂದ ಲಾಟ್ವಿಯಾದ ಜುರ್ಮಾಲಾದಲ್ಲಿ ನಿಗದಿಯಾಗಿದೆ.

ದುಬೈನಲ್ಲಿ 2020ರ ಮಾರ್ಚ್‌ನಲ್ಲಿ ನಡೆದ ಏಷ್ಯಾ–ಓಸೀನಿಯಾ ಗುಂಪು–1ರ ಪಂದ್ಯದಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ಭಾರತ ತಂಡ ಮೊದಲ ಬಾರಿ ವಿಶ್ವ ಗುಂಪು ಪ್ಲೇ ಆಫ್ಸ್‌ನಲ್ಲಿ ಸ್ಥಾನ ಗಳಿಸಿತ್ತು. ಆಗ ಲಾಟ್ವಿಯಾ, ಅಮೆರಿಕ ಎದುರು ಸೋತಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು