ಸೋಮವಾರ, ಅಕ್ಟೋಬರ್ 3, 2022
24 °C

ನಿವೃತ್ತಿಯ ಸುಳಿವು ನೀಡಿದ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್‌

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ನಿವೃತ್ತಿಯ ಸುಳಿವು ನೀಡಿದ್ದಾರೆ.

23 ಗ್ರ್ಯಾನ್‌ಸ್ಲಾಮ್‌ ಗೆದ್ದಿರುವ ಸೆರೆನಾ ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಯುಎಸ್ ಓಪನ್ ಟೂರ್ನಿಯ ಬಳಿಕ ನಿವೃತ್ತಿಯಾಗುವ ಮುನ್ಸೂಚನೆ ನೀಡಿದ್ದಾರೆ.

ವೋಗ್ ನಿಯತಕಾಲಿಕೆಯ ಮುಖಪುಟ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸೆರೆನಾ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದಾರೆ.

‘ಜೀವನದಲ್ಲಿ ನಾವು ಬೇರೆ ದಿಕ್ಕಿನಲ್ಲಿ ಚಲಿಸಲು ನಿರ್ಧರಿಸಬೇಕಾದ ಸಮಯ ಬರುತ್ತದೆ. ನೀವು ತುಂಬಾ ಇಷ್ಟಪಡುವುದನ್ನು ಬಿಟ್ಟು ಮುಂದುವರಿಯಬೇಕಾದ ಸಮಯ ಬಂದಾಗ ಅದು ತುಂಬಾ ಕಷ್ಟಕರವಾಗಿರುತ್ತದೆ. ನಾನು ಟೆನಿಸ್ ಅನ್ನು ತುಂಬಾ ಖುಷಿಯಿಂದ ಆಡುತ್ತೇನೆ. ನಾನು ತಾಯಿಯಾಗಿ ಜವಾಬ್ದಾರಿ ನಿರ್ವಹಿಸುವತ್ತ ಗಮನಹರಿಸಬೇಕಿದೆ. ಮುಂದಿನ ಕೆಲವು ವಾರಗಳನ್ನು ನಾನು ಆಸ್ವಾದಿಸಲಿದ್ದೇನೆ’ ಎಂದು ಇನ್‌ಸ್ಟಾಗ್ರಾಂ ಸಂದೇಶದಲ್ಲಿ ಸೆರೆನಾ ಬರೆದುಕೊಂಡಿದ್ದಾರೆ.

ಕಳೆದ ವರ್ಷದ ವಿಂಬಲ್ಡನ್‌ನ ಮೊದಲ ಸುತ್ತಿನಲ್ಲಿ ಗಾಯಗೊಂಡು ಹೊರನಡೆದಿದ್ದ ಸೆರೆನಾ ಈ ವರ್ಷ ಜೂನ್‌ನಲ್ಲಿ ಕಣಕ್ಕಿಳಿದಿದ್ದರು. ಆದರೆ 364 ದಿನಗಳ ನಂತರ ಕಣಕ್ಕಿಳಿದ ಮೊದಲ ಗ್ರ್ಯಾನ್‌ಸ್ಲಾಮ್ ಪಂದ್ಯದಲ್ಲಿಯೇ ಆಘಾತ ಅನುಭವಿಸಿ, ವಿಂಬಲ್ಡನ್‌ ಟೂರ್ನಿಯ ಪಯಣ ಅಂತಿಮಗೊಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು