ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Australian Open: ಸೆಮಿಫೈನಲ್‌ನಲ್ಲಿ ಸೋತ ಹಾಲಿ ಚಾಂಪಿಯನ್ ಜೊಕೊವಿಚ್ ನಿರ್ಗಮನ

Published 26 ಜನವರಿ 2024, 9:35 IST
Last Updated 26 ಜನವರಿ 2024, 9:35 IST
ಅಕ್ಷರ ಗಾತ್ರ

ಮೆಲ್ಬರ್ನ್: ತಮ್ಮ ವೃತ್ತಿ ಜೀವನದಲ್ಲಿ ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಕನಸು ಮೆಲ್ಬರ್ನ್ ಪಾರ್ಕ್‌ನಲ್ಲಿ ಈಡೇರಲಿಲ್ಲ.

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿರುವ ಹಾಲಿ ಚಾಂಪಿಯನ್ ಜೊಕೊವಿಚ್ ಸವಾಲು ಕೊನೆಗೊಂಡಿದೆ.

ಇದರೊಂದಿಗೆ 10 ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜೊಕೊವಿಚ್, ಮೆಲ್ಬರ್ನ್ ಪಾರ್ಕ್‌ನಲ್ಲಿ ಸತತ 33 ಗೆಲುವುಗಳ ಬಳಿಕ ಸೋಲಿನ ಕಹಿ ಅನುಭವಿಸಿದ್ದಾರೆ.

ಇಂದು ರಾಡ್ ಲೇವಲ್ ಅರೇನಾದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜೊಕೊವಿಚ್ ಅವರನ್ನು ನಾಲ್ಕನೇ ಶ್ರೇಯಾಂಕದ ಇಟಲಿಯ ಜಾನಿಕ್ ಸಿನ್ನರ್ ಅವರು 6-1, 6-2, 6-7 (6/8), 6-3 ರಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟರು.

36 ವರ್ಷದ ಜೊಕೊವಿಚ್‌ಗೆ 2018ರ ಬಳಿಕ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಎದುರಾದ ಮೊದಲ ಸೋಲು ಇದಾಗಿದೆ.

ಜೊಕೊವಿಚ್ ಆಸ್ಟ್ರೇಲಿಯನ್ ಓಪನ್ ಗೆಲುವಿನ ಪಟ್ಟಿ:

(2008, 2011, 2012, 2013, 2015, 2016, 2019, 2020, 2021, 2023)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT