ಶನಿವಾರ, ಮೇ 28, 2022
28 °C
ಅಮೆರಿಕದ ಜೆಸಿಕಾ ಪೆಗುಲ ಎದುರು ಗೆಲುವು ಸಾಧಿಸಿದ ಪೋಲೆಂಡ್‌ನ ಇಗಾ ಸ್ವಾಟೆಕ್

ಮಿಯಾಮಿ ಓಪನ್ ಟೆನಿಸ್ ಟೂರ್ನಿ: ನೊವೊಮಿ ಒಸಾಕ ಫೈನಲ್‌ಗೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮಿಯಾಮಿ: ಗೆಲುವಿನ ಸಂಭ್ರಮದಲ್ಲಿ ಅಂಗಣದಲ್ಲೇ ಆನಂದಬಾಷ್ಪ ಸುರಿಸಿದ ಜಪಾನ್‌ನ ನವೊಮಿ ಒಸಾಕ ಅವರು ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದರು.

ಗುರುವಾರ ತಡರಾತ್ರಿ ನಡೆದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಒಲಿಂಪಿಕ್ ಚಾಂಪಿಯನ್ ಬೆಲಿಂದಾ ಬೆನ್ಸಿಕ್ ವಿರುದ್ಧ ನವೊಮಿ 4-6, 6-3, 6-4ರಲ್ಲಿ ಜಯ ಗಳಿಸಿ ಮೊದಲ ಬಾರಿ ಮಿಯಾಮಿ ಓಪನ್‌ ಟೂರ್ನಿಯ ಪ್ರಶಸ್ತಿ ಹಂತ ತಲುಪಿದರು.

ಅಂತಿಮ ಹಣಾಹಣಿಯಲ್ಲಿ ಅವರು ಪೋಲೆಂಡ್‌ನ ಇಗಾ ಸ್ವಾಟೆಕ್ ವಿರುದ್ಧ ಸೆಣಸುವರು. ಎರಡನೇ ಶ್ರೇಯಾಂಕಿತ ಆಟಗಾರ್ತಿ ಸ್ವಾಟೆಕ್ 6-2 7-5ರಲ್ಲಿ ಅಮೆರಿಕದ ಜೆಸಿಕಾ ಪೆಗುಲ ಅವರನ್ನು ಸೋಲಿಸಿದರು. ಇದು ಈ ಬಾರಿ ಅವರ ಸತತ 16ನೇ ಗೆಲುವು ಆಗಿದೆ. 

ಮೊದಲ ಸೆಟ್‌ನಲ್ಲಿ ನಿರಾಯಾಸ ಜಯ ಸಾಧಿಸಿದ ಸ್ವಾಟೆಕ್ ಎರಡನೇ ಸೆಟ್‌ನಲ್ಲಿ ಎದುರಾಳಿಯಿಂದ ಭಾರಿ ಪೈಪೋಟಿ ಎದುರಿಸಿದರು. 5–4ರ ಮುನ್ನಡೆಯಲ್ಲಿದ್ದಾಗ ಜೆಸಿಕಾ ತಿರುಗೇಟು ನೀಡಿದರು. ಹೀಗಾಗಿ ಪಂದ್ಯ ರೋಚಕವಾಯಿತು. ಆದರೆ ಪಟ್ಟು ಬಿಡದ ಸ್ವಾಟೆಕ್ ಗೆಲುವು ತಮ್ಮದಾಗಿಸಿಕೊಂಡರು. 21 ವರ್ಷದ ಸ್ವಾಟೆಕ್ ಅವರು 2016ರ ನಂತರ ಇಂಡಿಯನ್ ವೆಲ್ಸ್ ಮತ್ತು ಮಿಯಾಮಿ ಓಪನ್‌ನಲ್ಲಿ ಸತತ ಎರಡು ಬಾರಿ ಫೈನಲ್ ಪ್ರವೇಶಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡರು.   

ನಾಲ್ಕು ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳ ಒಡತಿ ಒಸಾಕ 18 ಏಸ್‌ಗಳನ್ನು ಸಿಡಿಸಿ ಬೆನ್ಸಿಕ್‌ಗೆ ಆಘಾತ ನೀಡಿದರು. ಟೂರ್ನಿಯಲ್ಲಿ ಅವರು ಈವರೆಗೆ ಒಂದೇ ಒಂದು ಸೆಟ್ ಕಳೆದುಕೊಂಡಿಲ್ಲ. ಸೆಮಿಫೈನಲ್‌ನ ಮೊದಲ ಸೆಟ್‌ನಲ್ಲಿ ಎರಡು ಬಾರಿ ಮಾತ್ರ ಮೊದಲ ಸರ್ವ್ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟ ಅವರು ಉಳಿದಂತೆ ಪಂದ್ಯದುದ್ದಕ್ಕೂ ಗಮನಾರ್ಹ ಆಟವಾಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು