ಭಾನುವಾರ, ಜನವರಿ 19, 2020
23 °C

ಕಾಳ್ಗಿಚ್ಚು | ಮೆಲ್ಬರ್ನ್‌ನಲ್ಲಿ ದಟ್ಟ ಹೊಗೆ: ಅಂಗಳದಲ್ಲೇ ಕುಸಿದ ಆಟಗಾರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌: ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಅರ್ಹತಾ ಹಂತದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಸ್ಲೊವೇನಿಯಾದ ದಲಿಲಾ ಜಾಕುಪೊವಿಕ್‌ ಅವರು ಮಂಗಳವಾರ ಅಂಗಳದಲ್ಲೇ ಕುಸಿದು ಬಿದ್ದರು.

ಕಾಳ್ಗಿಚ್ಚಿನ ಪರಿಣಾಮ ಮೆಲ್ಬರ್ನ್‌ನಲ್ಲಿ ದಟ್ಟ ಹೊಗೆ ಆವರಿಸಿದೆ. ಇದರ ನಡುವೆಯೇ ಪಂದ್ಯ ನಡೆದಿದ್ದರಿಂದ ದಲಿಲಾ ಅವರು ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲಿದರು.

ಸ್ಟೆಫಾನಿ ವೊಗೆಲೆ ಎದುರಿನ ಪಂದ್ಯದಲ್ಲಿ ದಲಿಲಾ 6–4 ರಿಂದ ಮೊದಲ ಸೆಟ್‌ ಗೆದ್ದರು. ಎರಡನೇ ಸೆಟ್‌ನಲ್ಲಿ 5–6ರಿಂದ ಹಿನ್ನಡೆ ಕಂಡಿದ್ದ ವೇಳೆ ಅಂಗಳ ತೊರೆದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು