ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌ಗೆ ಮುಗುರುಜಾ ವಿದಾಯ

Published 21 ಏಪ್ರಿಲ್ 2024, 5:17 IST
Last Updated 21 ಏಪ್ರಿಲ್ 2024, 5:17 IST
ಅಕ್ಷರ ಗಾತ್ರ

ಮ್ಯಾಡ್ರಿಡ್: ಎರಡು ಬಾರಿಯ ಗ್ರ್ಯಾನ್‌ಸ್ಲ್ಯಾಮ್ ಚಾಂಪಿಯನ್ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಅವರು ತಮ್ಮ 30ನೇ ವಯಸ್ಸಿನಲ್ಲಿ ವೃತ್ತಿಪರ ಟೆನಿಸ್‌ಗೆ ವಿದಾಯ ಹೇಳಿದರು. ‌ 

2016ರ ಫ್ರೆಂಚ್ ಓಪನ್ ಫೈನಲ್‌ ನಲ್ಲಿ ಸೆರೆನಾ ವಿಲಿಯಮ್ಸ್ ಮತ್ತು 2017ರ ವಿಂಬಲ್ಡನ್ ಫೈನಲ್‌ನಲ್ಲಿ ವೀನಸ್ ವಿಲಿಯಮ್ಸ್ ಅವರನ್ನು ಮುಗುರುಜಾ ಸೋಲಿಸಿದ್ದರು. ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿಲಿಯಮ್ಸ್ ಸಹೋದರಿಯರನ್ನು ಸೋಲಿಸಿದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆ ಅವರದು. ಸ್ಪೇನ್‌ ಆಟಗಾರ್ತಿ ತಮ್ಮ ವೃತ್ತಿಜೀವನದಲ್ಲಿ 10 ಪ್ರಶಸ್ತಿ ಗಳಿಸಿದ್ದಾರೆ. 2015ರ ವಿಂಬಲ್ಡನ್ ಮತ್ತು 2020ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಅವರ ಕೊನೆಯ ಪ್ರಮುಖ ಗೆಲುವು 2021 ರ ಎಟಿಪಿ ಫೈನಲ್ಸ್ ಆಗಿತ್ತು. 2023ರ ಜನವರಿಯಿಂದ ಮುಗುರುಜಾ ಯಾವುದೇ ಟೂರ್ನಿಯಲ್ಲಿ ಆಡಿಲ್ಲ. 

‘ಇದು ನಿವೃತ್ತಿ ಹೊಂದುವ ಸಮಯ ಮತ್ತು ನನ್ನ ಜೀವನದಲ್ಲಿ ಹೊಸ ಅಧ್ಯಾಯ ತೆರೆಯುವ ಸಮಯ ಎಂದು ಭಾವಿಸುವೆ’ ಎಂದು ಮಾಜಿ ವಿಶ್ವ ನಂ.1 ಆಟಗಾರ್ತಿ ಶನಿವಾರ ಮ್ಯಾಡ್ರಿಡ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT