ಸೋಮವಾರ, ಸೆಪ್ಟೆಂಬರ್ 27, 2021
21 °C

Tokyo Olympics: ಬೆಲಿಂಡಾಗೆ ಸಿಂಗಲ್ಸ್‌ ಚಿನ್ನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಸ್ವಿಟ್ಜರ್ಲೆಂಡ್‌ನ ಬೆಲಿಂಡಾ ಬೆನ್‌ಸಿಚ್‌, ಟೋಕಿಯೊ ಕೂಟದಲ್ಲಿ ಶನಿವಾರ ಮಹಿಳಾ ಟೆನಿಸ್‌ನ ಸಿಂಗಲ್ಸ್‌ ವಿಭಾಗದ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.  

ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಬೆನ್‌ಸಿಚ್‌ ಫೈನಲ್‌ ಹಣಾಹಣಿಯಲ್ಲಿ 7–5, 2–6, 6–3ರಿಂದ ಜೆಕ್‌ ಗಣರಾಜ್ಯದ ಮಾರ್ಕೆಟಾ ವೊಂಡ್ರೌಸೊವಾ ಅವರನ್ನು ಸೋಲಿಸಿದರು.

ಮೊದಲ ಸೆಟ್‌ನಲ್ಲಿ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನಿಂದ ಸೆಣಸಿದರು. ಕೊನೆಯ ಎರಡು ಗೇಮ್‌ಗಳಲ್ಲಿ ಮಿಂಚಿದ ಬೆನ್‌ಸಿಚ್‌ ಸೆಟ್‌ ಕೈವಶಪಡಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಮಾರ್ಕೆಟಾ ತಿರುಗೇಟು ನೀಡಿದರು. ಹೀಗಾಗಿ ಮೂರನೇ ಸೆಟ್‌ನ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು. ನಿರ್ಣಾಯಕ ಸೆಟ್‌ನಲ್ಲಿ ಹಲವು ತಪ್ಪುಗಳನ್ನು ಮಾಡಿದ ಮಾರ್ಕೆಟಾ ಕೈಸುಟ್ಟುಕೊಂಡರು.

ಬೆನ್‌ಸಿಚ್‌ ಭಾನುವಾರ ನಡೆಯುವ ಮಹಿಳಾ ಡಬಲ್ಸ್‌ ವಿಭಾಗದ ಚಿನ್ನದ ಪದಕದ ಪೈಪೋಟಿಯಲ್ಲಿ ವಿಕ್ಟೋರಿಜಾ ಗೊಲುಬಿಚ್‌ ಜೊತೆಗೂಡಿ ಕಣಕ್ಕಿಳಿಯಲಿದ್ದಾರೆ.

ಈ ಜೋಡಿ, ಜೆಕ್‌ ಗಣರಾಜ್ಯದ ಬಾರ್ಬೊರಾ ಕ್ರೆಜ್ಸಿಕೊವಾ ಮತ್ತು ಕ್ಯಾತರಿನಾ ಸಿನಿಯಾಕೊವಾ ಸವಾಲು ಎದುರಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು