ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Wimbledon | ರೂನ್ ಮಣಿಸಿ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಜೊಕೊವಿಚ್

Published 9 ಜುಲೈ 2024, 9:07 IST
Last Updated 9 ಜುಲೈ 2024, 9:07 IST
ಅಕ್ಷರ ಗಾತ್ರ

ಲಂಡನ್: ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಕ್ವಾರ್ಟರ್ ‌ಫೈನಲ್‌ಗೆ ಪ್ರವೇಶಿಸಿದ್ದಾರೆ.

ಇದರೊಂದಿಗೆ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ 60ನೇ ಹಾಗೂ ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ 15ನೇ ಸಲ ಕ್ವಾರ್ಟರ್‌ಫೈನಲ್‌ಗೇರಿದ ಸಾಧನೆ ಮಾಡಿದರು.

ದಾಖಲೆಯ ಎಂಟನೇ ವಿಂಬಲ್ಡನ್ ಕಿರೀಟ ಎದುರು ನೋಡುತ್ತಿರುವ ಜೊಕೊವಿಚ್, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಡೆನ್ಮಾರ್ಕ್‌ನ ಹೋಲ್ಗರ್‌ ರೂನ್‌ರನ್ನು 6-3, 6-4, 6-2ರ ಅಂತರದಲ್ಲಿ ಸೋಲಿಸಿದರು.

ಎರಡನೇ ಶ್ರೇಯಾಂಕಿತ ಜೊಕೊವಿಚ್ ಅವರು ಅಂತಿಮ ಎಂಟರ ಘಟ್ಟದಲ್ಲಿ ಒಂಬತ್ತನೇ ಶ್ರೇಯಾಂಕಿತ ಆಸ್ಟ್ರೇಲಿಯಾದ ಅಲೆಕ್ಸ್‌ ಡಿ ಮಿನೋರ್ ಸವಾಲನ್ನು ಎದುರಿಸಲಿದ್ದಾರೆ.

ದಾಖಲೆಯ 24 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಚ್, ಎರಡು ತಾಸಿನ ಹೋರಾಟದ ಅಂತಿಮದಲ್ಲಿ ರೂನ್ ವಿರುದ್ಧ ಮೇಲುಗೈ ಸಾಧಿಸಲು ಯಶಸ್ವಿಯಾದರು.

ಪಂದ್ಯದ ವೇಳೆ ಪ್ರೇಕ್ಷಕರು ಹೀಯಾಳಿಸಿರುವುದಕ್ಕೆ ತಿರುಗೇಟು ನೀಡಿರುವ ಜೊಕೊವಿಚ್, 'ಕಳೆದ 20 ವರ್ಷಗಳಿಂದ ಪ್ರವಾಸ ಮಾಡುತ್ತಿದ್ದೇನೆ. ಎಲ್ಲ ತಂತ್ರಗಾರಿಕೆಯೂ ನನಗೂ ಗೊತ್ತಿದೆ. ಟಿಕೆಟ್ ಕೊಟ್ಟು ಬಂದು ಟೆನಿಸ್ ಅನ್ನು ಪ್ರೀತಿಸುವ, ಗೌರವಾನ್ವಿತ ಜನರತ್ತ ನಾನು ಗಮನ ಕೇಂದ್ರಿಕರಿಸುತ್ತೇನೆ' ಎಂದು ಹೇಳಿದ್ದಾರೆ.

ಕ್ವಾರ್ಟರ್ ಫೈನಲ್:

  • ಯಾನಿಕ್ ಸಿನ್ನರ್ vs ಡೇನಿಯಲ್‌ ಮೆಡ್ವೆಡೆವ್‌

  • ಕಾರ್ಲೊಸ್‌ ಅಲ್ಕರಾಜ್ vs ಟಾಮಿ ಪಾಲ್

  • ಲೊರೆಂಝೊ ಮುಸೆಟ್ಟಿ vs ಟೇಲರ್ ಫ್ರಿಟ್ಜ್

  • ಅಲೆಕ್ಸ್‌ ಡಿ ಮಿನೋರ್ vs ನೊವಾಕ್ ಜೊಕೊವಿಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT