ಗುರುವಾರ , ಜೂನ್ 24, 2021
24 °C

ಅಮೆರಿಕ ಓ‍ಪನ್‌ನಲ್ಲಿ ಜೊಕೊವಿಚ್ ಕಣಕ್ಕೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಬೆಲ್‌ಗ್ರೇಡ್: ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಕಣಕ್ಕೆ ಇಳಿಯುವುದಾಗಿ ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ನೊವಾಕ್ ಜೊಕೊವಿಚ್ ಗುರುವಾರ ಘೋಷಿಸಿದ್ದಾರೆ. ಟೂರ್ನಿಯು ಆಗಸ್ಟ್ 31ರಿಂದ ಸೆಪ್ಟೆಂಬರ್ 13ರ ವರೆಗೆ ನಡೆಯಲಿದೆ.

ಒಟ್ಟು 17 ಗ್ರ್ಯಾನ್‌ ಸ್ಲ್ಯಾಮ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿರುವ ಸರ್ಬಿಯಾದ ಜೊಕೊವಿಚ್ ಅವರ ಈ ನಿರ್ಧಾರವು ಆಯೋಜಕರಲ್ಲಿ ಹುರುಪು ತುಂಬಿದೆ. ಯಾಕೆಂದರೆ ಪ್ರಮುಖ ಟೆನಿಸ್ ಪಟುಗಳಾದ ರಫೇಲ್ ನಡಾಲ್, ಸ್ಟ್ಯಾನ್ ವಾವ್ರಿಂಕಾ ಮತ್ತಿತರರು ಕೋವಿಡ್‌–19 ಭೀತಿಯಿಂದಾಗಿ ಟೂರ್ನಿಯಿಂದ ಈಗಾಗಲೇ ಹಿಂದೆ ಸರಿದಿದ್ದಾರೆ. ಅಮೆರಿಕ ಓಪನ್‌ನಲ್ಲಿ ಪಾಲ್ಗೊಳ್ಳುವುದು ಅಸಾಧ್ಯ ಎಂದು ಜೂನ್‌ನಲ್ಲಿ ಹೇಳಿದ್ದ ಜೊಕೊವಿಚ್ ಈಗ ನಿರ್ಧಾರ ಬದಲಿಸಿರುವುದು ಟೆನಿಸ್ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಟೂರ್ನಿಗೆ ಸಜ್ಜಾಗುವುದು ಸುಲಭವಾಗಿರಲಿಲ್ಲ. ಆದರೆ ಕೊನೆಯಲ್ಲಿ ಈ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿದ್ದು ಖುಷಿ ತಂದಿದೆ‘ ಎಂದು ಜೊಕೊವಿಚ್ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು