ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಮದಾಬಾದ್, ಚೆನ್ನೈ ಪಿಚ್‌ಗಳು ಸಾಧಾರಣ: ಐಸಿಸಿ ರೇಟಿಂಗ್‌ಗೆ ದ್ರಾವಿಡ್ ಅಸಮಾಧಾನ

Published 22 ಅಕ್ಟೋಬರ್ 2023, 6:57 IST
Last Updated 22 ಅಕ್ಟೋಬರ್ 2023, 6:57 IST
ಅಕ್ಷರ ಗಾತ್ರ

ಧರ್ಮಶಾಲಾ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಆಡಿರುವ ಅಹಮದಾಬಾದ್ ಮತ್ತು ಚೆನ್ನೈ ಪಿಚ್‌ಗಳು ಸಾಧಾರಣ ಮಟ್ಟದಲ್ಲಿದ್ದವು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ರೇಟಿಂಗ್ ನೀಡಿವೆ.

ಈ ನಿರ್ಧಾರಕ್ಕೆ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚೆನ್ನೈ ವಿರುದ್ಧ ಆಸ್ಟ್ರೇಲಿಯಾ ಮತ್ತು ಅಹಮದಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು ದಾಖಲಿಸಿತ್ತು. ಚೆನ್ನೈಯಲ್ಲಿ ಆಸ್ಟ್ರೇಲಿಯಾ 199 ಮತ್ತು ಅಹಮದಾಬಾದ್‌ನಲ್ಲಿ ಪಾಕಿಸ್ತಾನ 191 ರನ್‌ಗಳಿಗೆ ಆಲೌಟ್ ಆಗಿತ್ತು.

ಐಸಿಸಿಗೆ ಎಲ್ಲ ಗೌರವಗಳೊಂದಿಗೆ ಆ ಎರಡು ಪಿಚ್‌ಗಳಿಗೆ ನೀಡಲಾದ ಸಾಧಾರಣ ರೇಟಿಂಗ್ ಅನ್ನು ನಾನು ಖಂಡಿತವಾಗಿಯೂ ಒಪ್ಪುವುದಿಲ್ಲ. ಅವರೆಡು ಅತ್ಯುತ್ತಮ ವಿಕೆಟ್ (ಪಿಚ್) ಎಂದು ನಾನು ಭಾವಿಸುತ್ತೇನೆ. ನೀವು ಕೇವಲ 350 ರನ್‌ಗಳ ಪಂದ್ಯವನ್ನು ನೋಡಲು ಬಯಸಿದರೆ ಮತ್ತು ಅಂತಹ ಪಿಚ್‌ಗಳಿಗೆ ಮಾತ್ರ ಉತ್ತಮ ಪಿಚ್ ರೇಟಿಂಗ್ ನೀಡಲು ಬಯಸುವುದಾದರೆ ಅದನ್ನು ನಾನು ಒಪ್ಪುವುದಿಲ್ಲ. ನನ್ನ ಪ್ರಕಾರ ಆಟಗಾರರ ವಿಭಿನ್ನ ಕೌಶಲ್ಯಗಳ ಪ್ರದರ್ಶನವೂ ಆಗಬೇಕು ಎಂದು ಹೇಳಿದ್ದಾರೆ.

ಬೌಂಡರಿ, ಸಿಕ್ಸರ್‌ ಹೊಡೆಯುವುದನ್ನು ಮಾತ್ರ ನೋಡಲು ಬಯಸುವುದಾದರೆ ಅದಕ್ಕೆ ಹೇಳಿ ಮಾಡಿಸಿದಂತಹ ಟಿ20 ಪಿಚ್‌ಗಳಿವೆ. ಬಹುಶಃ ಪುಣೆ, ದೆಹಲಿಯಲ್ಲಿ 350 ಪ್ಲಸ್ ರನ್‌ಗಳ ವಿಕೆಟ್ ನೋಡಿದ್ದೇವೆ. ಅವುಗಳು ಮಾತ್ರ ಉತ್ತಮ ವಿಕೆಟ್ ಎಂದಾದರೆ ಮತ್ತೆ ಇಲ್ಲಿ ಬೌಲರ್‌ಗಳು ಯಾಕೆ ? ಸ್ಪಿನ್ನರ್‌ಗಳು ಯಾತಕ್ಕಾಗಿ ಇದ್ದಾರೆ ? ಎಂದು ಕೇಳಿದ್ದಾರೆ.

ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಆಟಗಾರರ ವಿವಿಧ ಕೌಶಲ್ಯಗಳನ್ನು ಪ್ರದರ್ಶನ ನೀಡುವ ವೇದಿಕೆಯಾಗಬೇಕು ಎಂದು ದ್ರಾವಿಡ್ ಒತ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT