ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂ.ರಾ ಕ್ರಿಕೆಟ್‌ನಲ್ಲಿ ಅಧಿಕ ಸಿಕ್ಸ್: ಕ್ರಿಸ್ ಗೇಲ್ ದಾಖಲೆ ಮುರಿದ ರೋಹಿತ್ ಶರ್ಮಾ

Published 11 ಅಕ್ಟೋಬರ್ 2023, 14:10 IST
Last Updated 11 ಅಕ್ಟೋಬರ್ 2023, 14:10 IST
ಅಕ್ಷರ ಗಾತ್ರ

ನವದೆಹಲಿ: ಅಫ್ಗಾನಿಸ್ತಾನ ಎದುರಿನ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ ನಡೆಸುತ್ತಿರುವ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್‌ ಎಂಬ ಶ್ರೇಯಕ್ಕೆ ಭಾಜನರಾದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್‌ ಎಂಬ ದಾಖಲೆ ಈವರೆಗೆ ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟರ್‌ ಕ್ರಿಸ್‌ ಗೇಲ್ ಅವರ ಹೆಸರಿನಲ್ಲಿತ್ತು. ಇದೀಗ ಆ ದಾಖಲೆಯನ್ನು ರೋಹಿತ್‌ ಕಸಿದುಕೊಂಡಿದ್ದಾರೆ.

ಗೇಲ್‌ ಖಾತೆಯಲ್ಲಿ 553 ಸಿಕ್ಸರ್‌ಗಳಿದ್ದರೆ, ರೋಹಿತ್‌ ಬರೋಬ್ಬರಿ 555 ಸಿಕ್ಸರ್‌ ಸಿಡಿಸಿದ್ದಾರೆ.

ನಂತರದ ಸ್ಥಾನದಲ್ಲಿ ಕ್ರಮವಾಗಿ ಪಾಕಿಸ್ತಾನ ಶಾಹಿದ್‌ ಅಫ್ರಿದಿ (476), ನ್ಯೂಜಿಲೆಂಡ್‌ನ ಬ್ರೆಂಡನ್‌ ಮೆಕಲಂ (398) ಮತ್ತು ಮಾರ್ಟಿನ್‌ ಗಪ್ಟಿಲ್‌ (383) ಇದ್ದಾರೆ.

ವಿಶ್ವಕಪ್‌ನಲ್ಲಿ ಸಾವಿರ ರನ್‌
ಅಫ್ಗಾನಿಸ್ತಾನ ಬೌಲರ್‌ಗಳೆದುರು ಲೀಲಾಜಾಲವಾಗಿ ಬ್ಯಾಟ್‌ ಬೀಸುತ್ತಿರುವ ರೋಹಿತ್‌, ಏಕದಿನ ವಿಶ್ವಕಪ್‌ ಪಂದ್ಯಗಳಲ್ಲಿ 1 ಸಾವಿರ ರನ್‌ ಕಲೆಹಾಕಿದ ಬ್ಯಾಟರ್‌ಗಳ ಸಾಲಿಗೆ ಸೇರಿದರು. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ 23ನೇ ಹಾಗೂ ಭಾರತದ 4ನೇ ಬ್ಯಾಟರ್‌ ಎನಿಸಿದರು.

ಈವರೆಗೆ 19 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿರುವ ರೋಹಿತ್ 6 ಶತಕ ಮತ್ತು 4 ಅರ್ಧಶತಕ ಸಹಿತ 1055 ರನ್ ಗಳಿಸಿದ್ದಾರೆ.

12 ಓವರ್‌ಗಳಲ್ಲಿ 100 ರನ್‌
ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಮಾಡಿದ ಅಫ್ಗಾನಿಸ್ತಾನ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂದು 272 ರನ್ ಕಲೆಹಾಕಿದೆ. ಈ ಗುರಿ ಬೆನ್ನತ್ತಿರುವ ಭಾರತಕ್ಕೆ ನಾಯಕ ರೋಹಿತ್ ಬಿರುಸಿನ ಆರಂಭ ನೀಡಿದ್ದಾರೆ.

ರೋಹಿತ್‌ಗೆ ಸಾಥ್‌ ನೀಡುತ್ತಿರುವ ಇಶಾನ್‌ ಕಿಶನ್ (24 ಎಸೆತಗಳಲ್ಲಿ 14 ರನ್‌) ರಕ್ಷಣಾತ್ಮಕ ಆಟದ ಮೊರೆಹೋಗಿದ್ದಾರೆ.

ಈ ಜೋಡಿ ಕೇವಲ 12 ಓವರ್‌ಗಳಲ್ಲೇ 100 ರನ್‌ ಕೆಲಹಾಕಿ, ಗುರಿಯತ್ತ ಮುನ್ನುಗ್ಗಿದೆ. ರೋಹಿತ್‌ 48 ಎಸೆತಗಳಲ್ಲಿ 4 ಸಿಕ್ಸರ್‌ ಸಹಿತ 79 ರನ್ ಸಿಡಿಸಿದ್ದಾರೆ. ಇದು ಏಕದಿನ ಮಾದರಿಯಲ್ಲಿ ರೋಹಿತ್‌ ಬ್ಯಾಟ್‌ನಿಂದ ಬಂದ 53ನೇ ಅರ್ಧಶತಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT