ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC PAK vs CAN: ಜಯದ ಹಾದಿಗೆ ಮರಳಿದ ಪಾಕ್

Published 11 ಜೂನ್ 2024, 16:25 IST
Last Updated 11 ಜೂನ್ 2024, 16:25 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಮೊಹಮದ್‌ ರಿಜ್ವಾನ್ (ಅಜೇಯ 53, 53ಎ) ಮತ್ತು ಬಾಬರ್ ಅಜಂ (33, 33ಎ) ಅವರ ಜೊತೆಯಾಟದ ನೆರವಿನಿಂದ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್‌ನಲ್ಲಿ ಕೆನಡಾ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿತು.

ಈ ಟೂರ್ನಿಯಲ್ಲಿ ಪಾಕಿಸ್ತಾನ ಮೊದಲ ಗೆಲುವು ದಾಖಲಿಸುವ ಮೂಲಕ ‘ಎ’ ಗುಂಪಿನ ಪಾಯಿಂಟ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು. ಕೆನಡಾ ತಂಡ ನಾಲ್ಕನೇ ಸ್ಥಾನದಲ್ಲಿದೆ.

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆ್ಯರನ್ (52; 44ಎ, 4X4, 6X4) ಅವರ ಅಮೋಘ ಬ್ಯಾಟಿಂಗ್ ಬಲದಿಂದ ಕೆನಡಾ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 106 ರನ್ ಗಳಿಸಿತು.

ಈ ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಪಾಕ್‌ ತಂಡವು 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ 107 ರನ್ ಗಳಿಸಿತು.

ಭಾನುವಾರ ನಡೆದ ಪಂದ್ಯದಲ್ಲಿ ಭಾರತ ವಿರುದ್ಧ ಸೋತ ಬಳಿಕ ಪಾಕ್‌ ತಂಡದಲ್ಲಿ ಬದಲಾವಣೆ ಮಾಡಲಾಗಿತ್ತು. ಆರಂಭಿಕ ಆಟಗಾರನಾಗಿ ಬಂದ ಸೈಮ್ ಅಯೂಬ್ (6) ಅವರು ದಿಲೊನ್ ಹೆಲಿಗರ್ ಬೌಲಿಂಗ್‌ನಲ್ಲಿ ಶ್ರೇಯಸ್ ಮೊವ್ವಾಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಅನುಭವಿ ಆಟಗಾರ ರಿಜ್ವಾನ್ ಸಂಯಮದಿಂದ ಆಟವಾಡಿ ಅಜೇಯ ಅರ್ಧ ಶತಕ ಗಳಿಸಿದರು. ನಾಯಕ ಬಾಬರ್ 33 ರನ್ ಗಳಿಸಿ ಉಪಯುಕ್ತ ಕಾಣಿಕೆ ನೀಡಿದರು. ಬಾಬರ್ ಮತ್ತು ರಿಜ್ಚಾನ್ ಎರಡನೇ ವಿಕೆಟ್‌ಗೆ 50 ರನ್‌ ಸೇರಿಸಿದರು.

ಇದಕ್ಕೂ ಮೊದಲು ಪಾಕಿಸ್ತಾನ ತಂಡದ ಅನುಭವಿ ಹಾಗೂ ಸಮರ್ಥ ಬೌಲರ್‌ಗಳನ್ನು ಲೀಲಾಜಾಲವಾಗಿ ಆಡಿದ ಕೆನಡಾದ ಆ್ಯರನ್ ಜಾನ್ಸನ್ ಅರ್ಧಶತಕ ಗಳಿಸಿದರು.

3ನೇ ಓವರ್‌ನಲ್ಲಿಯೇ ಮೊಹಮ್ಮದ್ ಆಮೀರ್ ಎಸೆತದಲ್ಲಿ ನವನೀತ್ ಕ್ಲೀನ್‌ಬೌಲ್ಡ್ ಆದರು. ಈ ಹಂತದಲ್ಲಿ ಪಾಕ್ ಬೌಲರ್‌ಗಳು ಹಿಡಿತ ಸಾಧಿಸುವ ಯತ್ನ ಮಾಡಿದರು. ಒಂದು ಬದಿಯಲ್ಲಿ ವಿಕೆಟ್‌ಗಳು ಪತನವಾಗುತ್ತಿದ್ದರೆ ಜೋನ್ಸ್‌ ಮಾತ್ರ ಏಕಾಂಗಿಯಾಗಿ ಬೀಸಾಟ ವಾಡಿದರು. ಪರ್ಗತ್ ಸಿಂಗ್, ನಿಕೊಲಸ್ ಕಿರ್ಟನ್, ಶ್ರೇಯಸ್ ಮೊವ್ವಾ ಹಾಗೂ ರವೀಂದ್ರಪಾಲ್ ಸಿಂಗ್ ಒಂದಂಕಿ ಗಳಿಸಿದರು. ಕೇವಲ 54 ರನ್‌ಗಳಿಗೆ ತಂಡವು 5 ವಿಕೆಟ್ ಕಳೆದುಕೊಂಡಿತು.

ಕೆನಡಾ ತಂಡದ ನಾಯಕ, ಪಾಕ್ ಮೂಲದವರಾದ ಸಾಧ್ ಬಿನ್ ಜಾಫರ್ (10 ರನ್) ಹಾಗೂ ಖಲೀಂ ಸನಾ (ಔಟಾಗದೆ 13) ಕೂಡ ತಂಡಕ್ಕೆ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರು: ಕೆನಡಾ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 106 (ಆ್ಯರನ್ ಜಾನ್ಸನ್ 52, ಸಾದ್ ಬಿನ್ ಜಾಫರ್ 10, ಖಲೀಂ ಸನಾ ಔಟಾಗದೆ 13, ಮೊಹಮ್ಮದ್ ಆಮೀರ್ 13ಕ್ಕೆ2, ಹ್ಯಾರಿಸ್ ರವೂಫ್ 26ಕ್ಕೆ2) ‌

ಪಾಕಿಸ್ತಾನ: 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ 107 (ಮೊಹಮದ್‌ ರಿಜ್ವಾನ್ ಔಟಾಗದೇ 53, ಬಾಬರ್ ಅಜಂ 33, ದಿಲ್ಲಾನ್‌ ಹೇಲಿಗರ್ 18ಕ್ಕೆ2, ಜೆರೆಮಿ ಗೊರ್ಡ‌ನ್ 17ಕ್ಕೆ1) ಪಂದ್ಯ ಶ್ರೇಷ್ಠ: ಮೊಹಮ್ಮದ್‌ ಆಮೀರ್

ನಸೀಂ ಶಾ ಹಾಕಿದ ಮೊದಲ ಓವರ್‌ನ ಮೊದಲೆರಡೂ ಎಸೆತಗಳನ್ನು ಬೌಂಡರಿ ಬಾರಿಸಿದ ಆ್ಯರನ್ ಅಮೋಘ ಆರಂಭ ನೀಡಿದರು. ‌

ಇನ್ನೊಂದು ಓವರ್‌ನಲ್ಲಿ ನವನೀತ್ ಧಲೀವಾಲ್ ಅವರೂ ಒಂದು ಬಾರಿ ಬೌಂಡರಿಗೆರೆ ದಾಟಿಸಿದರು. ಇದರಿಂದಾಗಿ 3 ಓವರ್‌ ಆಗುವ ಮುನ್ನವೇ ತಂಡದ ಖಾತೆಗೆ 20 ರನ್‌ಗಳು ಸೇರಿದವು. ಆದರೆ

ಆದರೂ ಆ್ಯರನ್ ಮಾತ್ರ ಎದೆಗುಂದಲಿಲ್ಲ. 39 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅದೂ ಸಿಕ್ಸರ್‌ನೊಂದಿಗೆ 50ರ ಗಡಿ ದಾಟಿದ್ದು ವಿಶೇಷ.

14ನೇ ಓವರ್‌ನಲ್ಲಿ ಜಾನ್ಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ನಸೀಂ ಶಾ ‘ಮುಯ್ಯಿ’ ತೀರಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT