ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸ್‌: ದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್

Published 19 ನವೆಂಬರ್ 2023, 11:44 IST
Last Updated 19 ನವೆಂಬರ್ 2023, 11:44 IST
ಅಕ್ಷರ ಗಾತ್ರ

ಅಹಮದಾಬಾದ್: ಈ ಬಾರಿಯ ವಿಶ್ವಕಪ್‌ ಟೂರ್ನಿಯುದ್ದಕ್ಕೂ ಬಿರುಸಿನ ಬ್ಯಾಟಿಂಗ್‌ ಮೂಲಕ ಗಮನ ಸೆಳೆದ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಫೈನಲ್‌ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದರು.

ನಾಯಕನಾಗಿ ಅಧಿಕ ರನ್‌
ಟೂರ್ನಿಯಲ್ಲಿ 11 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿರುವ ಅವರು, 597 ರನ್‌ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಮೂರು ಅರ್ಧಶತಕಗಳೂ ಸೇರಿವೆ. ಆ ಮೂಲಕ ಅವರು ಏಕದಿನ ವಿಶ್ವಕಪ್‌ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ನಾಯಕ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ.

ಒಂದೇ ವಿಶ್ವಕಪ್‌ನಲ್ಲಿ ಅಧಿಕ ಸಿಕ್ಸ್‌
ಇನಿಂಗ್ಸ್‌ ಆರಂಭದಿಂದಲೇ ಬೀಸಾಟವಾಡುವ ರೋಹಿತ್‌, ಎದುರಾಳಿ ತಂಡದ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. 125.94ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಗಳಿಸಿರುವ ಅವರ ಬ್ಯಾಟ್‌ನಿಂದ ಈ ವಿಶ್ವಕಪ್‌ನಲ್ಲಿ 31 ಸಿಕ್ಸರ್‌ಗಳು ಬಂದಿವೆ. ಒಂದೇ ವಿಶ್ವಕಪ್‌ ಟೂರ್ನಿಯಲ್ಲಿ ಈ ಹಿಂದೆ ಯಾವೊಬ್ಬ ಬ್ಯಾಟರ್‌ ಇಷ್ಟು ಸಿಕ್ಸ್‌ ಬಾರಿಸಿಲ್ಲ. 2015ರಲ್ಲಿ ವೆಸ್ಟ್‌ಇಂಡೀಸ್‌ನ ಕ್ರಿಸ್‌ಗೇಲ್‌ 26 ಸಿಕ್ಸ್‌ ಬಾರಿಸಿದ್ದು, ಈವರೆಗೆ ದಾಖಲೆಯಾಗಿತ್ತು.

ಒಟ್ಟಾರೆ ವಿಶ್ವಕಪ್‌ ಟೂರ್ನಿಗಳಲ್ಲಿ ರೋಹಿತ್‌ 54 ಸಿಕ್ಸರ್‌ಗಳನ್ನು ಸಿಡಿಸಿದ್ದು, 50ಕ್ಕಿಂತ ಹೆಚ್ಚು ಸಿಕ್ಸ್‌ ಬಾರಿಸಿದ ಏಕೈಕ ಬ್ಯಾಟರ್ ಎನಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ 86 ಸಿಕ್ಸ್‌
ರೋಹಿತ್‌ ಶರ್ಮಾ ಇಂದು (ನವೆಂಬರ್‌ 19ರಂದು) ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಫೈನಲ್‌ ಪಂದ್ಯದಲ್ಲಿ 3 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಒಂದೇ ಎದುರಾಳಿ ತಂಡದ ವಿರುದ್ಧ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್‌ ಎನಿಸಿಕೊಂಡರು.

ರೋಹಿತ್‌ ಆಸಿಸ್‌ ವಿರುದ್ಧ ಒಟ್ಟು 86 ಸಿಕ್ಸರ್‌ ಸಿಡಿಸಿದ್ದಾರೆ. ಕ್ರಿಸ್‌ ಗೇಲ್‌ ಅವರು ಇಂಗ್ಲೆಂಡ್‌ ವಿರುದ್ಧ 85 ಸಿಕ್ಸರ್‌ ಸಿಡಿಸಿದ್ದು ಇದುವರೆಗೆ ದಾಖಲೆಯಾಗಿತ್ತು. ಪಾಕಿಸ್ತಾನದ ಶಾಹಿದ್‌ ಅಫ್ರಿದಿ (ಶ್ರೀಲಂಕಾ ವಿರುದ್ಧ 63 ಸಿಕ್ಸ್‌), ಶ್ರೀಲಂಕಾದ ಸನತ್‌ ಜಯಸೂರ್ಯ (ಪಾಕಿಸ್ತಾನ ವಿರುದ್ಧ 53 ಸಿಕ್ಸ್‌) ನಂತರದ ಸ್ಥಾನಗಳಲ್ಲಿದ್ದಾರೆ.

ಇನಿಂಗ್ಸ್‌ ಬೆಳೆಸುವ ಹೊಣೆ ಹೊತ್ತ ರಾಹುಲ್
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ 40 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 197 ರನ್ ಗಳಿಸಿದೆ.

ನಾಯಕ ರೋಹಿತ್‌ ಶರ್ಮಾ (47), ಶುಭಮನ್‌ ಗಿಲ್‌ (4), ವಿರಾಟ್‌ ಕೊಹ್ಲಿ (54) ಶ್ರೇಯಸ್‌ ಅಯ್ಯರ್‌ (4) ಹಾಗೂ ರವೀಂದ್ರ ಜಡೇಜ (9) ಔಟಾಗಿದ್ದಾರೆ.

102 ಎಸೆತಗಳಲ್ಲಿ 64 ರನ್‌ ಕಲೆಹಾಕಿರುವ ಕೆ.ಎಲ್.ರಾಹುಲ್‌ ಮತ್ತು 8 ರನ್‌ ಗಳಿಸಿರುವ ಸೂರ್ಯಕುಮಾರ್‌ ಯಾದವ್‌ ಇನಿಂಗ್ಸ್‌ ಬೆಳೆಸುವ ಹೊಣೆ ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT