ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWC 2023: ಬಾಂಗ್ಲಾದ ಕೊನೆಯ ಪಂದ್ಯಕ್ಕೆ ಶಕಿಬ್ ಅಲಭ್ಯ; ಅನಾಮುಲ್ ಸೇರ್ಪಡೆ

Published 7 ನವೆಂಬರ್ 2023, 11:15 IST
Last Updated 7 ನವೆಂಬರ್ 2023, 11:15 IST
ಅಕ್ಷರ ಗಾತ್ರ

ನವದೆಹಲಿ: ಬಾಂಗ್ಲಾದೇಶದ ಕ್ರಿಕೆಟ್‌ ತಂಡದ ನಾಯಕ ಶಕಿಬ್ ಅಲ್ ಹಸನ್ ಅವರು ಬೆರಳಿನ ಮೂಳೆಮುರಿತದಿಂದಾಗಿ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ.

ಸೋಮವಾರ ದೆಹಲಿಯಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಶಕಿಬ್ ಅವರ ತೋರು ಬೆರಳಿಗೆ ಗಾಯವಾಗಿತ್ತು. ಪಂದ್ಯದ ನಂತರ ಎಕ್ಸ್‌ರೇ ಪರೀಕ್ಷೆಯಲ್ಲಿ ಬೆರಳಿನ ಮೂಳೆಗೆ ಪೆಟ್ಟಾಗಿರುವುದು ಪತ್ತೆಯಾಗಿದೆ. ಬಾಂಗ್ಲಾದೇಶ ತನ್ನ ಕೊನೆಯ ಪಂದ್ಯವನ್ನು ಶನಿವಾರ ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ

‘ಇನಿಂಗ್ಸ್‌ನ ಆರಂಭದಲ್ಲೇ ಅವರಿಗೆ ಗಾಯವಾಗಿತ್ತು. ಆದರೆ ಬೆರಳಿಗೆ ಬ್ಯಾಂಡೇಜ್ ಮತ್ತು ನೋವುನಿವಾರಕಗಳನ್ನು ತೆಗೆದುಕೊಂಡು ಅವರು ಬ್ಯಾಟ್‌ ಮಾಡಿದರು’ ಎಂದು ಬಾಂಗ್ಲಾದೇಶದ ಫಿಜಿಯೊ ಬೇಯ್ಜುದುಲ್ ಇಸ್ಲಾಂ ಖಾನ್ ಅವರು ಮಂಗಳವಾರ ತಿಳಿಸಿದ್ದಾರೆ.

ಅವರು ಮಂಗಳವಾರವೇ ತವರಿಗೆ ಮರಳಿದ್ದು ಚಿಕಿತ್ಸೆಯ ಪ್ರಕ್ರಿಯೆ ಆರಂಭಿಸಿದ್ದಾರೆ. ಶಕಿಬ್ ಸ್ಥಾನದಲ್ಲಿ ಅನಾಮುಲ್ ಹಖ್ ಬಿಜೊಯ್ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ.

ಸೋಮವಾರ ಏಂಜೆಲೊ ಮ್ಯಾಥ್ಯೂಸ್ ಅವರ ವಿವಾದಾತ್ಮಕ ಟೈಮ್ಡ್‌ ಔಟ್‌ ಪ್ರಕರಣದಲ್ಲಿ ಶಕಿಬ್ ಅವರು ಕೇಂದ್ರಬಿಂದುವಾಗಿದ್ದಾರೆ. ಅವರ ಮನವಿಯ ಮೇಲೆ ಅಂಪೈರ್‌ಗಳು ಶ್ರೀಲಂಕಾದ ಆಲ್‌ರೌಂಡರ್‌ಗೆ ಔಟ್ ತೀರ್ಪು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT