ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್ | ಅಮೆರಿಕ–ಕೆನಡಾ ಹಣಾಹಣಿ: ಪಟೇಲ್ ಬಳಗಕ್ಕೆ ಜಾಫರ್‌ ಪಡೆ ಸವಾಲು

Published 1 ಜೂನ್ 2024, 23:30 IST
Last Updated 1 ಜೂನ್ 2024, 23:30 IST
ಅಕ್ಷರ ಗಾತ್ರ

ಡಲ್ಲಾಸ್: ಕ್ರೀಡಾ ಜಗತ್ತಿಗೆ ಹಲವಾರು ಖ್ಯಾತನಾಮ ಕ್ರೀಡಾಪಟುಗಳನ್ನು ನೀಡಿದ ದೇಶ ಅಮೆರಿಕ. ಇದೀಗ ಕ್ರಿಕೆಟ್‌ನತ್ತ ಚಿತ್ತ ಹೊರಳಿಸಿದೆ. 

ಭಾನುವಾರ (ಭಾರತೀಯ ಕಾಲಮಾನ) ಬೆಳಿಗ್ಗೆ ಆರಂಭವಾಗಲಿರುವ ಒಂಬತ್ತನೇ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯೊಂದಿಗೆ ಈ ದೇಶದಲ್ಲಿ ಹೊಸ ಪರ್ವ ಆರಂಭವಾಗಲಿದೆ. ಗ್ರ್ಯಾಂಡ್ ಪ್ರಿಯರಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಲಿವೆ. 

ಭಾರತ ಮೂಲದ ಮೊನಾಂಕ್ ಪಟೇಲ್  ಅಮೆರಿಕ ತಂಡಕ್ಕೆ ಹಾಗೂ  ಪಾಕಿಸ್ತಾನ ಮೂಲದ ಸಾದ್ ಬಿನ್ ಜಾಫರ್ ಅವರು ಕೆನಡಾ ಬಳಗಕ್ಕೆ ನಾಯಕತ್ವ ವಹಿಸಿದ್ದಾರೆ. ಆದರೆ ಇನ್ನೊಂದು ವಿಶೇಷವೆಂದರೆ ಈ ಎರಡೂ ತಂಡಗಳಲ್ಲಿ ಭಾರತ, ಪಾಕ್, ಇಂಗ್ಲೆಂಡ್ ಮತ್ತು ಸ್ಥಳೀಯ ಆಟಗಾರರು ಇದ್ದಾರೆ. ಅಮೆರಿಕ ತಂಡಕ್ಕೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಲಾ ಅವರು ಮುಖ್ಯ ಕೋಚ್ ಆಗಿದ್ದಾರೆ.  ಅಮೆರಿಕ ತಂಡದಲ್ಲಿ ಚಿಕ್ಕಮಗಳೂರಿನ ಮೂಡಿಗೆರೆಯ ನಾಸ್ತುಷ್ ಕೆಂಜಿಗೆ ಹಾಗೂ ಕೆನಡಾದಲ್ಲಿ ದಾವಣಗೆರೆಯ ಶ್ರೇಯಸ್ ಮೊವ್ವಾ ಇದ್ದಾರೆ. 

ಈ ಪಂದ್ಯದಲ್ಲಿ ಅಮೆರಿಕವೇ ಗೆಲುವಿನ ಫೆವರಿಟ್. ಈಚೆಗಷ್ಟೇ ಬಾಂಗ್ಲಾದೇಶ ಎದುರಿನ ಸರಣಿಯಲ್ಲಿ 2–1ರಿಂದ ಗೆದ್ದು ಬಂದಿರುವ ಅಮೆರಿಕ ಆತ್ಮವಿಶ್ವಾಸದಲ್ಲಿದೆ. ಅಲ್ಲದೇ ಈಚೆಗೆ ನಡೆದಿದ್ದ ಇನ್ನೊಂದು ಸರಣಿಯಲ್ಲಿ  ಅಮೆರಿಕ 4–0ಯಿಂದ ಕೆನಡಾ ವಿರುದ್ಧವೂ ಜಯಿಸಿತ್ತು. ಅಮೆರಿಕ ತಂಡದಲ್ಲಿ ನ್ಯೂಜಿಲೆಂಡ್‌ನ ಅನುಭವಿ ಬ್ಯಾಟರ್ ಕೋರಿ ಆ್ಯಂಡರ್ಸನ್ ಇದ್ದಾರೆ. 2015ರ ವಿಶ್ವಕಪ್ ಟೂರ್ನಿಯಲ್ಲಿ ಕಿವೀಸ್ ಫೈನಲ್ ತಲುಪಿದ್ದ ಸಂದರ್ಭದಲ್ಲಿ ಕೋರಿ ಆಡಿದ್ದರು. 

ತಂಡದ ನಾಯಕ ಮೊನಾಂಕ್ ಪಟೇಲ್ ಮೂಲತಃ ಗುಜರಾತ್‌ನ ಆನಂದ್‌ ನಗರದವರು. ಇಲ್ಲಿಯೇ ವಯೋಮಿತಿ ಕ್ರಿಕೆಟ್‌ನಲ್ಲಿ ಆಡಿದ್ದರು. 2016ರಲ್ಲಿ ಅಮೆರಿಕಕ್ಕೆ ತೆರಳಿದ್ದರು. 2018ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಆಡುವ ಅಮೆರಿಕ ತಂಡದ ಕ್ವಾಲಿಫೈಯರ್‌ ಟೂರ್ನಿಯಲ್ಲಿ ಪಟೇಲ್ ಆರು ಇನಿಂಗ್ಸ್‌ಗಳಿಂದ 208 ರನ್‌ ಗಳಿಸಿದ್ದರು. 2019ರಲ್ಲಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಅಂತರರಾಷ್ಟ್ರೀಯ ಟಿ20 ಪಂದ್ಯಕ್ಕೆ ಪದಾರ್ಪಣೆ ಮಾಡಿದರು. 

ಐಪಿಎಲ್‌ನಲ್ಲಿ ಈ ಹಿಂದೆ ಆಡಿದ್ದ ಎಡಗೈ ಸ್ಪಿನ್ನರ್ ಹರಮೀತ್ ಸಿಂಘರ್ (ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್) ಹಾಗೂ ಮಿಲಿಂದ್ ಕುಮಾರ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರೂ ಅಮೆರಿಕ ತಂಡದಲ್ಲಿದ್ದಾರೆ. ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಚೇತರಿಸಿಕೊಂಡಿರುವ ಅಲಿ ಖಾನ್ ಈಗ ಫಿಟ್ ಆಗಿದ್ದಾರೆ. ಬೌಲಿಂಗ್ ಆಲ್‌ರೌಂಡರ್ ನಿತೀಶ್ ಕುಮಾರ್ ಅವರು ಈ ಮುಂದೆ ಕೆನಡಾ ತಂಡದಲ್ಲಿ 18 ಪಂದ್ಯಗಳಲ್ಲಿ ಆಡಿದ್ದರು. 2019ರಲ್ಲಿ ಅಮೆರಿಕ ತಂಡಕ್ಕೆ ಸೇರ್ಪಡೆಯಾದರು.

ಎಡಗೈ ಸ್ಪಿನ್ನರ್ ಸಾದ್ ಬಿನ್ ಜಾಫರ್ ಅವರು ಕೆನಡಾ ತಂಡದ ಅನುಭವಿ ಆಟಗಾರ.  ಅಗ್ರಕ್ರಮಾಂಕದ ಬ್ಯಾಟರ್ ಆ್ಯರನ್ ಜಾನ್ಸನ್, ಎಡಗೈ ವೇಗಿ ಖಲೀಂ ಸನಾ ಅವರ ಮೇಲೂ ಅಪಾರ ನಿರೀಕ್ಷೆ ಇದೆ. ಈ ತಂಡದಲ್ಲಿರುವ ಆಟಗಾರರ ಪೈಕಿ ನಾಲ್ವರು ಮಾತ್ರ 30 ವರ್ಷದೊಳಗಿನವರಾಗಿದ್ದಾರೆ.  

ತಂಡಗಳು: ಅಮೆರಿಕ: ಮೊನಾಂಕ್ ಪಟೇಲ್ (ನಾಯಕ), ಆ್ಯರನ್ ಜೋನ್ಸ್ (ಉಪನಾಯಕ), ಆ್ಯಂಡ್ರಿಸ್ ಗೌಸ್, ಕೋರಿ ಆ್ಯಂಡರ್ಸನ್, ಅಲಿ ಖಾನ್, ಹರ್ಮೀತ್ ಸಿಂಗ್, ಜೆಸ್ಸಿ ಸಿಂಗ್, ಮಿಲಿಂದ್ ಕುಮಾರ್, ನಿಸರ್ಗ್ ಪಟೇಲ್, ನಿತೀಶ್ ಕುಮಾರ್, ನಾಸ್ತುಷ್ ಕಂಜಿಗೆ , ಸೌರಭ್ ನೇತ್ರಾಳ್ವಕರ್, ಶ್ಯಾಡ್ಲಿ ವ್ಯಾನ್ ಶಾಲ್ಕವಿಕ್, ಸ್ಟೀವನ್ ಟೇಲರ್, ಶಯಾನ್ ಜಹಾಂಗೀರ್.  ಸ್ಟುವರ್ಟ್ ಲಾ (ಮುಖ್ಯ ಕೋಚ್),  ಮೈಕೆಲ್ ವೊಸ್ (ಸಹಾಯಕ ಕೋಚ್)

ಕೆನಡಾ: ಸಾದ್ ಬಿನ್ ಜಾಫರ್ (ನಾಯಕ), ಆ್ಯರನ್ ಜಾನ್ಸನ್, ರವೀಂದರ್ ಪಾಲ್ ಸಿಂಗ್, ನವನೀತ್ ಧಲಿವಾಲ್, ಕಲೀಂ ಸನಾ, ದಿಲೊನ್ ಹ್ಯಾಲಿಗರ್, ಜೆರೆಮಿ ಗೊರ್ಡಾನ್, ನಿಖಿಲ್ ದತ್ತಾ, ಪರಗತ್ ಸಿಂಗ್, ನಿಕೊಲಸ್ ಕಿರ್ಟನ್, ರಯಾನ್ ಖಾನ್ ಪಠಾಣ್, ಜುನೇದ್ ಸಿದ್ಧಿಕಿ, ದಿಲ್‌ಪ್ರೀತ್ ಬಜ್ವಾ, ಶ್ರೇಯಸ್ ಮೊವ್ವಾ, ರಿಷ್ವಿ ಜೋಶಿ. ಪುಬುದು ದಸನಾಯಕೆ (ಮುಖ್ಯ ಕೋಚ್), ಖುರಮ್ ಚೊಹಾನ್ (ಸಹಾಯಕ ಕೋಚ್). 

ಪಂದ್ಯ ಆರಂಭ: ಬೆಳಿಗ್ಗೆ 6 (ಭಾರತೀಯ ಕಾಲಮಾನ)

ನೇರಪ್ರಸಾರ : ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್. 

ಬಲಾಬಲ (ಟಿ20 ಮಾದರಿ)

ಪಂದ್ಯ; 7

ಅಮೆರಿಕ ಜಯ; 5

ಕೆನಡಾ ಜಯ; 2

ಕೆನಡಾ ತಂಡದಲ್ಲಿರುವ ಕರ್ನಾಟಕದ ದಾವಣಗೆರೆಯ ಶ್ರೇಯಸ್ ಮೊವ್ವಾ  –ಎಎಫ್‌ಪಿ ಚಿತ್ರ
ಕೆನಡಾ ತಂಡದಲ್ಲಿರುವ ಕರ್ನಾಟಕದ ದಾವಣಗೆರೆಯ ಶ್ರೇಯಸ್ ಮೊವ್ವಾ  –ಎಎಫ್‌ಪಿ ಚಿತ್ರ
ಅಮೆರಿಕ ತಂಡದ ನಾಯಕ ಮೊನಾಂಕ್ ಪಟೇಲ್  –ಎಎಫ್‌ಪಿ ಚಿತ್ರ
ಅಮೆರಿಕ ತಂಡದ ನಾಯಕ ಮೊನಾಂಕ್ ಪಟೇಲ್  –ಎಎಫ್‌ಪಿ ಚಿತ್ರ
ಕೆನಡಾ ತಂಡದ ನಾಯಕ ಸಾದ್ ಬಿನ್ ಜಾಫರ್  –ಎಎಫ್‌ಪಿ ಚಿತ್ರ
ಕೆನಡಾ ತಂಡದ ನಾಯಕ ಸಾದ್ ಬಿನ್ ಜಾಫರ್  –ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT