ಕಪಿಲ್‌ದೇವ್‌ನ ಅವಿಸ್ಮರಣೀಯ ಇನ್ನಿಂಗ್ಸ್‌ಗೆ 36 ವರ್ಷ! 

ಬುಧವಾರ, ಜೂಲೈ 17, 2019
29 °C

ಕಪಿಲ್‌ದೇವ್‌ನ ಅವಿಸ್ಮರಣೀಯ ಇನ್ನಿಂಗ್ಸ್‌ಗೆ 36 ವರ್ಷ! 

Published:
Updated:

ನವದೆಹಲಿ: ಟರ್ನ್‌ಬ್ರಿಡ್ಜ್ ವೆಲ್ಸ್‌ನಲ್ಲಿ ಕಪಿಲ್ ದೇವ್‌ನ ಅವಿಸ್ಮರಣೀಯ ಇನ್ನಿಂಗ್ಸ್‌ಗೆ 36 ವರ್ಷ!. 1983 ಜೂನ್ 18ರಂದು ವಿಶ್ವಕಪ್ ಪಂದ್ಯದಲ್ಲಿ ಜಿಂಬಾಬ್ವೆ ತಂಡದ ವಿರುದ್ಧದ ಪಂದ್ಯದಲ್ಲಿ 17 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡು ಭಾರತ ತಂಡ ಒದ್ದಾಡುತ್ತಿದ್ದ ಸಮಯದಲ್ಲಿ ರಕ್ಷಕನಾಗಿ ಬಂದಿದ್ದರು ಕಪಿಲ್ ದೇವ್.

138 ಎಸೆತ ಎದುರಿಸಿ ಅಜೇಯ 175 ರನ್‌ಗಳಿಸಿ ಕಪಿಲ್ ದೇವ್ ಭಾರತ ತಂಡದ ರಕ್ಷಕನಾಗಿ ನಿಂತದ್ದನ್ನು ಕ್ರಿಕೆಟ್ ಪ್ರೇಮಿಗಳು ಮರೆತಿಲ್ಲ. ವಿಶ್ವಕಪ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ದಾಖಲಿಸಿದ್ದೂ ಕಪಿಲ್ ದೇವ್. 16 ಬೌಂಡರಿ ಮತ್ತು 6 ಸಿಕ್ಸರ್‌ಗಳಿಂದ ಕಪಿಲ್ ಮಿಂಚಿದರು. ಈ ಸಿಕ್ಸರ್‌ಗಳಲ್ಲಿ ಒಂದು ಸಿಕ್ಸರ್ ನೆವಿಲ್ ಕ್ರಿಕೆಟ್ ಕ್ರೀಡಾಂಗಣದ ಮೇಲ್ಛಾವಣಿ ಮೇಲೆ ಬಿದ್ದಿತ್ತು. ಆ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಕಪಿಲ್ ಆಗಿದ್ದರು.

ಕಪಿಲ್‌ನ ಈ ಇನ್ನಿಂಗ್ಸ್‌ನ ವಿಡಿಯೊ ಇದೆಯೇ? ಎಂದು ಕೇಳಿದರೆ ಉತ್ತರ ಇಲ್ಲ. ಯಾಕೆಂದರೆ ಆಗ ವಿಶ್ವಕಪ್‌ ಕ್ರಿಕೆಟ್ ಪಂದ್ಯಗಳನ್ನು ಪ್ರಸಾರ ಮಾಡುತ್ತಿದ್ದ  ಬಿಬಿಸಿ ಆ ದಿನ ಮುಷ್ಕರ ನಿರತವಾಗಿತ್ತು. ಆ ದಿನ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬಂದಿದ್ದ ನಾಲ್ಕೂವರೆ ಸಾವಿರ ವೀಕ್ಷಕರು ಸೌಭಾಗ್ಯಶಾಲಿಗಳು. ಅವರಿಗೆ ಮಾತ್ರ ಈ ಇನ್ಸಿಂಗ್ಸ್ ಆಸ್ವಾದಿಸುವ ಭಾಗ್ಯ ಒಲಿದಿತ್ತು.
 31 ರನ್‌ಗಳಿಂದ ಜಿಂಬಾಬ್ವೆಯನ್ನು ಪರಾಭವಗೊಳಿಸಿ ಸೆಮಿಫೈನಲ್‌ಗೇರಿದ್ದ ಭಾರತ ಫೈನಲ್ ಪಂದ್ಯದಲ್ಲಿ ವಿಂಡೀಸ್‌ನ್ನು ಸೋಲಿಸಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತ್ತು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !