ಹಾವೇರಿ: ಬೆಂಗಳೂರು ನಗರದ ಈಜುಪಟುಗಳು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ರಾಜ್ಯ ಮಟ್ಟದ ಪೈಕಾ (ಕೇಂದ್ರ ಸರ್ಕಾರದ ಪಂಚಾಯಿತಿ ಯುವ ಕ್ರೀಡಾ ಔರ್ ಖೇಲ್ ಅಭಿಯಾನ್) ಮಹಿಳಾ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಪಾರುಪತ್ಯ ಸಾಧಿಸಿದ್ದಾರೆ.

100 ಮೀ. ಫ್ರೀಸ್ಟೈಲ್‌ನಲ್ಲಿ ಬೆಂಗಳೂರಿನ ಕೀರ್ತನಾ ಆರ್ ಪ್ರಥಮ ಸ್ಥಾನ ಪಡೆದುಕೊಂಡರು. ಇವರು ನಿಗದಿತ ಗುರಿ ತಲುಪಲು (1.10. ಸೆಕೆಂಡ್‌ಗೂ ಹೆಚ್ಚು ಕಾಲ) ತಗೆದುಕೊಂಡರು. ಇದೇ ವಿಭಾಗದಲ್ಲಿ ಸೃಷ್ಟಿ ರಮೇಶ ದ್ವಿತೀಯ ಹಾಗೂ ಧಾರವಾಡದ ಸ್ಫೂರ್ತಿ ಪಾಟೀಲ ತೃತೀಯ ಸ್ಥಾನ ಪಡೆದುಕೊಂಡರು.

200 ಮೀ ಫ್ರೀಸ್ಟೈಲ್‌ನಲ್ಲಿ ಬೆಂಗಳೂರಿನ ಸಿಮ್ರನ್ ಎಂ., ಧಾರವಾಡದ ಋತ್ವಿಕಾ ಹುಳ್ಳೂರು ಹಾಗೂ ನಿಖಿತಾ ಪಾಟೀಲ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. 100 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಬೆಂಗಳೂರಿನ ಶ್ರೀಕಾರ ಕೆ.ರಾಜು (ಪ್ರಥಮ), ಸೃಷ್ಟಿ ರಮೇಶ (ದ್ವಿತೀಯ) ಹಾಗೂ ಧಾರವಾಡದ ನಿಖಿತಾ ಪಾಟೀಲ (ತೃತೀಯ) ಸ್ಥಾನ ಗಳಿಸಿದರು. 200 ಮೀ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಬೆಂಗಳೂರಿನ ಶ್ರೀಕಾರ ಕೆ.ರಾಜು, ಬೆಂಗಳೂರು ಗ್ರಾಮಾಂತರದ ಕೀರ್ತನಾ ಆರ್. ಹಾಗೂ ಮಂಡ್ಯದ ಅರುಂಧತಿ ಎಂ. ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು.

100 ಮೀ ಬಟರ್‌ಫ್ಲೈನಲ್ಲಿ ಬೆಂಗಳೂರಿನ ಶ್ರೀಕಾ ಕೆ.ರಾಜು, ಬೆಂಗಳೂರು ಗ್ರಾಮಾಂತರದ ಸಿಮ್ರಾನ್ ಎಂ. ದ್ವಿತೀಯ ಹಾಗೂ ಧಾರವಾಡದ ಋತ್ವಿಕಾ ಹುಳ್ಳೂರು ತೃತೀಯ, 200 ಮೀ ಐ.ಎಂನಲ್ಲಿ ಬೆಂಗಳೂರಿನ ಕೆ. ರಾಜು ಪ್ರಥಮ, ಸೃಷ್ಟಿ ರಮೇಶ (ದ್ವಿತೀಯ) ಹಾಗೂ ಧಾರವಾಡದ ಋತ್ವಿಕಾ ಎಂ.ಹುಳ್ಳೂರು (ತೃತೀಯ) ಸ್ಥಾನ ಗಳಿಸಿದರು.

4್ಡ100 ಮೀ ಫ್ರೀಸ್ಟೈಲ್ ರಿಲೇಯಲ್ಲಿ ಬೆಂಗಳೂರು ನಗರ ಪ್ರಥಮ ಸ್ಥಾನ ಗಳಿಸಿತು. ಹಾಸನ ಧಾರವಾಡ ಎರಡು ಹಾಗೂ ಮುರನೇ ಸ್ಥಾನ ಗಿಟ್ಟಿಸಿಕೊಂಡವು. 4್ಡ100 ಮೀ. ಮಿಡ್ಲೆ ರಿಲೇಯಲ್ಲಿ ಬೆಂಗಳೂರು ನಗರ ಪ್ರಥಮ, ಧಾರವಾಡ ದ್ವಿತೀಯ ಹಾಗೂ ಹಾಸನ ತೃತೀಯ ಸ್ಥಾನ ಪಡೆದುಕೊಂಡಿತು.

ಜಿಮ್ನಾಸ್ಟಿಕ್: ಜಿಮ್ನಾಸ್ಟಿಕ್ಸ್‌ನ ಪ್ಲೋರ್ ಎಕ್ಸರ್‌ಸೈಜ್‌ನಲ್ಲಿ ಕೊಡಗಿನ ದಿವ್ಯಾ ಸಿ.ಎಸ್. 10.90 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಗದುಗಿನ ವೀಣಾ ಬಾಬರ 10.15 ಅಂಕಗಳಿಂದ ದ್ವಿತೀಯ, ನಾಗವೇಣಿ ಕಡಗದ 10.5 ಅಂಕದೊಂದಿಗೆ ತೃತೀಯ ಸ್ಥಾನ ಪಡೆದರು. ಬ್ಯಾಲನ್ಸಿಂಗ್ ಭೀಮ್‌ನಲ್ಲಿ ತುಮಕೂರಿನ ಅರ್ಚನಾ ಜಿ. (10.35) ಪ್ರಥಮ, ಗದುಗಿನ ನಾಗವೇಣಿ ಕಡಗದ (10.20) ದ್ವಿತೀಯ ಹಾಗೂ ಗದುಗಿನ ಲಕ್ಷ್ಮೀ ದೇಸಾಯಿ (8.90) ತೃತೀಯ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.