ಮೈಸೂರು: ನಗರದ ಪೇರೆಂಟ್ಸ್ ಟೇಬಲ್ ಟೆನಿಸ್ ಅಸೋಸಿಯೇಷನ್‌ನ (ಪಿಟಿಟಿಎ) ಎಂ.ವಿ. ಸ್ಫೂರ್ತಿ ಇಲ್ಲಿ ನಡೆಯುತ್ತಿರುವ ಎನ್.ರಾಮು ಸ್ಮರಣಾರ್ಥ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಶನಿವಾರ ಯೂತ್ ಬಾಲಕಿಯರ ವಿಭಾಗದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಶುಕ್ರವಾರ ಜೂನಿಯರ್ ವಿಭಾಗದ ಬಾಲಕಿಯರ ಪ್ರಶಸ್ತಿ ಗೆದ್ದಿದ್ದ ಸ್ಫೂರ್ತಿ, ಯೂತ್ ಫೈನಲ್ಸ್‌ನಲ್ಲಿ ಅರ್ಚನಾ ಕಾಮತ್ (ಎಂಎಎಲ್‌ಎಲ್) ವಿರುದ್ಧ 7-11, 1-11, 11-8, 8-11, 11-6, 11-5, 11-7ರಿಂದ ಗೆಲುವು ಸಾಧಿಸಿದರು. ಇಲ್ಲಿ ಶನಿವಾರ ನಡೆದ ಟೂರ್ನಿಯ ಯುವತಿಯರ ವಿಭಾಗದ ಸೆಮಿಫೈನಲ್‌ನಲ್ಲಿ ಎಂ.ವಿ. ಸ್ಫೂರ್ತಿ ಅವರು ವಿ. ಖುಷಿ (ಎಂಎಟಿಟಿಎ) ವಿರುದ್ಧ 11-9, 11-9, 11-6, 11-4ರಿಂದ ಜಯಗಳಿಸಿದರು. ಅರ್ಚನಾ ಕಾಮತ್ ಅವರು ಅಕ್ಷತಾ ಮಲ್‌ಸೇಟ್ (ಬಿಟಿಟಿಎ) ಅವರನ್ನು 11-6, 11-5, 11-6, 11-6ರಿಂದ ಮಣಿಸಿದರು.

ಯುವಕರ ವಿಭಾಗ: ಈ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಅಕ್ಷಯ್ ಮಹಂತ್ (ಎಚ್‌ಟಿಟಿಎ) ಅವರು ಕರಣ್ ಗೊಲ್ಲೇರ್‌ಕೇರಿ (ಬಿಎನ್‌ಎಂ) ಅವರ ವಿರುದ್ಧ 11-6, 2-11, 11-9, 16-14, 12-10ರಿಂದ ಗೆಲುವು ಸಾಧಿಸಿದರು. ವಿ. ಪ್ರದೀಪ್ (ಬಿಎನ್‌ಎಂ) ಅವರು ಗೌರವ್ ಪುರಿ (ಬಿಎನ್‌ಎಂ) ಅವರನ್ನು 11-6, 11-5, 12-10, 12-10ರಿಂದ ಮಣಿಸಿದರು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಅಕ್ಷಯ್ ಮಹಂತ್ ಹಾಗೂ ವಿ. ಪ್ರದೀಪ್ ಸೆಣಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.