ಲಖನೌ (ಪಿಟಿಐ): ಆಲ್ರೌಂಡರ್ ಯುವರಾಜ್ ಸಿಂಗ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಾಲ್ಕನೇ ಅವತರಣಿಕೆಯಲ್ಲಿ ಪುಣೆ ವಾರೀಯರ್ಸ್ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಏಪ್ರಿಲ್ 8ರಿಂದ ನಡೆಯಲಿರುವ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ‘ಯುವಿ’ಗೆ ನಾಯಕತ್ವ ನೀಡುವ ತೀರ್ಮಾನವನ್ನು ಇದೇ ಮೊದಲ ಬಾರಿ ಐಪಿಎಲ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಫ್ರಾಂಚೈಸಿ ಸಹಾರಾ ಒಡೆತನದ ಪುಣೆ ವಾರೀಯರ್ಸ್ ಪ್ರಕಟಿಸಿದೆ.

ಪುಣೆ ತಂಡವು ಪ್ರಕಟಿಸಿರುವ ಅಂತಿಮ ಮೂವತ್ತು ಆಟಗಾರರ ಪಟ್ಟಿಯಲ್ಲಿ ವಿದೇಶಿ ಆಟಗಾರರಾದ ಗ್ರೇಮ್ ಸ್ಮಿತ್, ನಥಾನ್ ಮೆಕ್ಲಮ್, ವೈಯ್ನೆ ಪರ್ನೆಲ್, ಟಿಮ್ ಪೈನ್, ಜೆಸ್ಸಿ ರೈಡರ್ ಹಾಗೂ ಆ್ಯಂಗೆಲೊ ಮ್ಯಾಥ್ಯೂಸ್ ಅವರಿದ್ದಾರೆ.

ಯುವರಾಜ್ ಅಲ್ಲದೆ ಭಾರತ ತಂಡದಲ್ಲಿ ಆಡಿರುವ ಅನುಭವ ಹೊಂದಿರುವ ಆಶೀಶ್ ನೆಹ್ರಾ, ರಾಬಿನ್ ಉತ್ತಪ್ಪ ಹಾಗೂ ಮುರಳಿ ಕಾರ್ತಿಕ್ ಅವರು ಮೂವತ್ತರ ಪಟ್ಟಿಯಲ್ಲಿದ್ದಾರೆ. ‘ಅನುಭವಿ ಹಾಗೂ ಯುವ ಆಟಗಾರರ ಉತ್ತಮ ಸಂಯೋಜನೆಯ ತಂಡವನ್ನು ರೂಪಿಸಲಾಗಿದೆ’ ಎಂದು ಸಹಾರಾ ಉದ್ಯಮ ಸಂಪರ್ಕ ವಿಭಾಗದ ಮುಖ್ಯಸ್ಥ ಅಭಿಜಿತ್ ಸರ್ಕಾರ್ ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಅಭಿಷೇಕ್ ಜುಂಜುನ್ವಾಲಾ, ಧೀರಜ್ ಜಾಧವ್, ಏಕಲವ್ಯ ದ್ವಿವೇದಿ, ಗಣೇಶ್ ಗಾಯಕ್ವಾಡ್, ಹರಪ್ರೀತ್ ಸಿಂಗ್, ಹರ್ಷದ್ ಖಡಿವಾಲೆ, ಇಮ್ತಿ ಯಾಜ್ ಅಹ್ಮದ್, ಕಮ್ರನ್ ಖಾನ್, ಮನೀಶ್ ಪಾಂಡೆ, ಮಿಥುನ್ ಮಿನ್ಹಾ ಸ್, ಮೋನಿಶ್ ಮಿಶ್ರಾ, ರಾಹುಲ್ ಶರ್ಮ, ಸಚಿನ್ ರಾಣಾ, ಶ್ರೀಕಾಂತ್ ವಾಘ್ ಹಾಗೂ ಶ್ರೀಕಂಠ ಮುಂಡೆ ಅವರು ತಂಡದಲ್ಲಿರುವ ಯುವ ಕ್ರಿಕೆಟಿಗರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.