ನವದೆಹಲಿ (ಪಿಟಿಐ/ಐಎಎನ್ಎಸ್): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಏಳನೇ ಆವೃತ್ತಿಯ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಉದ್ಭವಿಸಿದ್ದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಏಪ್ರಿಲ್–ಮೇನಲ್ಲಿ ಲೋಕಸಭೆ ಚುನಾವಣೆ ಇರುವ ಕಾರಣ ಐಪಿಎಲ್ನ ಆರಂಭಿಕ ಹಂತದ ಪಂದ್ಯಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ (ಯುಎಇ) ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನಿಸಿದೆ.

ಈ ಕಾರಣ ಟ್ವೆಂಟಿ–20 ಟೂರ್ನಿಯ ಆರಂಭಿಕ ಹಂತದ ಪಂದ್ಯಗಳು ಏಪ್ರಿಲ್ 16ರಿಂದ 30ರವರೆಗೆ ಯುಎಇನಲ್ಲಿ ನಡೆಯಲಿವೆ. ಮೇ 1ರಿಂದ 12ರವರೆಗಿನ ಪಂದ್ಯಗಳನ್ನು ಕೇಂದ್ರ ಸರ್ಕಾರದ ಅನುಮತಿ ಸಿಕ್ಕರೆ ಭಾರತದಲ್ಲಿ, ಸಿಗದಿದ್ದರೆ ಬಾಂಗ್ಲಾದೇಶ ದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಮೇ 13ರಿಂದ ಜೂನ್ 1ರವರೆಗಿನ ಹಂತದ ಪಂದ್ಯಗಳು ಭಾರತದಲ್ಲಿ ನಡೆಯುವುದು ಖಚಿತವಾಗಿದೆ.

ಆದರೆ ಮೇ 1ರಿಂದಲೇ ಭಾರತದಲ್ಲಿ ಪಂದ್ಯಗಳನ್ನು ನಡೆಸಲು ಅನುವು ಮಾಡಿಕೊಡುವಂತೆ ಕ್ರಿಕೆಟ್ ಮಂಡಳಿಯು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಚುನಾವಣೆ ಮುಗಿದ ರಾಜ್ಯಗಳಲ್ಲಿ ಈ ಪಂದ್ಯಗಳನ್ನು ಆಯೋಜಿಸಲು ಮನವಿ ಮಾಡಲಾಗಿದೆ.

‘ಮೇ 1ರಿಂದ 12ರವರೆಗಿನ ಪಂದ್ಯಗಳನ್ನು ಕೂಡ ಭಾರತದ ಲ್ಲಿಯೇ ಆಯೋಜಿಸಬೇಕು ಎಂದುಕೊಂಡಿದ್ದೇವೆ. ಈ ಕಾರಣ ಆ ವೇಳೆಗೆ ಮತದಾನ ಮುಗಿದ ರಾಜ್ಯಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಅನುಮತಿಗಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿದ್ದೇವೆ. ಸರ್ಕಾರ ಅನುಮತಿ ನೀಡಿದರೆ ಹೆಚ್ಚಿನ ಪಂದ್ಯಗಳನ್ನು ಭಾರತದಲ್ಲಿ ಆಯೋಜಿಸಬಹುದು’ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ತಿಳಿಸಿದ್ದಾರೆ.

‘ಅಕಸ್ಮಾತ್ ಅವಕಾಶ ಸಿಗದಿದ್ದರೆ ಈ ಹಂತದ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ನಡೆಸಲಾಗುವುದು. ಈ ಸಂಬಂಧ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.

‘ಮೊದಲ ಹಂತದ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಇಲ್ಲಿನ ಅಬುಧಾಬಿ, ದುಬೈ, ಶಾರ್ಜಾ ಕ್ರೀಡಾಂಗಣಗಳಲ್ಲಿ ಕನಿಷ್ಠ 16 ಪಂದ್ಯಗಳು ಜರುಗಲಿವೆ. ಈ ಪಂದ್ಯಗಳನ್ನು ಆಯೋಜಿಸಲು ಅವಕಾಶ ಮಾಡಿಕೊಟ್ಟಿರುವ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಎಚ್ಎಚ್ ಶೇಕ್ ನಹಾಯನ್ ಮಬಾರಕ್ ಅಲ್ ನಹಾಯನ್ ಹಾಗೂ ಅಲ್ಲಿನ ಸರ್ಕಾರಕ್ಕೆ ನಮ್ಮ ಧನ್ಯವಾದಗಳು’ ಎಂದು ಪಟೇಲ್ ನುಡಿದಿದ್ದಾರೆ.

ಏಪ್ರಿಲ್ 16ರಂದು ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯಲಿದ್ದು, ಜೂನ್ 1ಕ್ಕೆ ಫೈನಲ್ ಜರುಗಲಿದೆ. ಈ ಮೊದಲು ಈ ಟೂರ್ನಿಯನ್ನು ಏಪ್ರಿಲ್ 9ರಿಂದ ಜೂನ್ 9ರವರೆಗೆ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಭಾರತದಲ್ಲಿ ಹೆಚ್ಚು ಪಂದ್ಯಗಳನ್ನು ನಡೆಸಲು ಅನುವಾಗುವಂತೆ ದಿನಾಂಕ ನಿಗದಿಪಡಿಸಲಾಗಿದೆ.

‘ಮೇ 13ರಿಂದ ಭಾರತದಲ್ಲಿ ನಡೆಯುವುದು ಖಚಿತ. ಆ ವೇಳೆಗೆ ಎಲ್ಲಾ ರಾಜ್ಯಗಳಲ್ಲಿ ಮತದಾನ ಮುಗಿದಿರುತ್ತದೆ. ಟೂರ್ನಿಯ ಉಳಿದ ಲೀಗ್ ಪಂದ್ಯಗಳು, ಪ್ಲೇ ಆಫ್ ಹಾಗೂ ಫೈನಲ್ ಪಂದ್ಯ ಗಳನ್ನು ಇಲ್ಲಿ ಆಯೋಜಿಸಲಿದ್ದೇವೆ. ಮತ ಎಣಿಕೆ ದಿನ (ಮೇ 16) ಯಾವುದೇ ಪಂದ್ಯಗಳು ಇರುವುದಿಲ್ಲ. ಟೂರ್ನಿಯ ಪೂರ್ಣ ವೇಳಾ ಪಟ್ಟಿಯನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು’ ಎಂದು ಮಂಡಳಿ ತಿಳಿಸಿದೆ.
ಲೋಕಸಭೆ ಚುನಾವಣೆ ಏಪ್ರಿಲ್ 7ರಿಂದ ಮೇ 12ರವರೆಗೆ ನಡೆಯಲಿದೆ. ಈ ಕಾರಣ ಐಪಿಎಲ್ ಪಂದ್ಯಗಳಿಗೆ ಭದ್ರತೆ ನೀಡಲು ಅಸಾಧ್ಯ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

2009ರಲ್ಲಿ ಕೂಡ ಲೋಕಸಭೆ ಚುನಾವಣೆ ಕಾರಣ ಐಪಿಎಲ್ ಟೂರ್ನಿಯ ಎರಡನೇ ಆವೃತ್ತಿಯನ್ನು ಸ್ಥಳಾಂತರಿಸಲಾಗಿತ್ತು. ಆ ಸಮಯದಲ್ಲಿ ಎಲ್ಲಾ ಪಂದ್ಯಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಈ ಬಾರಿ 47 ದಿನಗಳ ಅವಧಿಯಲ್ಲಿ 60 ಪಂದ್ಯಗಳು ನಡೆಯ ಲಿವೆ. ಹೋದ ಬಾರಿಗೆ ಹೋಲಿಸಿದರೆ ದಿನ ಹಾಗೂ ಪಂದ್ಯಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆರನೇ ಆವೃತ್ತಿಯಲ್ಲಿ 54 ದಿನ 76 ಪಂದ್ಯಗಳು ಜರುಗಿದ್ದವು. ಈ ಬಾರಿ ತಂಡಗಳ ಸಂಖ್ಯೆಯೂ ಕಡಿಮೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.