ಬೆಂಗಳೂರು: ‘ರಿಯೊ ಒಲಿಂಪಿಕ್ಸ್ನಲ್ಲಿ ನಮ್ಮ ರಿಲೇ ತಂಡ ಪದಕ ಗೆಲ್ಲುತ್ತದೆ ಎಂದು ಹೇಳಿದರೆ ಅತಿಶಯೋಕ್ತಿ ಯಾಗುತ್ತದೆ ಎಂಬುದು ನಮಗೆ ಗೊತ್ತು. ನಮ್ಮ ಸಾಮರ್ಥ್ಯದಲ್ಲಿ ಇನ್ನಷ್ಟು ಸುಧಾರಣೆಯಾಗಬೇಕು ಎಂಬುದೂ ನಮಗೆ ತಿಳಿದಿದೆ. ಈ ಬಾರಿಯ ಒಲಿಂಪಿಕ್ಸ್ಗೆ 37 ಅಥ್ಲೀಟ್ಗಳು ಅರ್ಹತೆ ಪಡೆದಿರುವುದನ್ನು ನೋಡಿದರೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ನಾವು ಪದಕ ಗೆಲ್ಲುವುದು ಕಷ್ಟವಲ್ಲವೆನಿಸುತ್ತದೆ...’

ಹೀಗೆ ಭರವಸೆ ವ್ಯಕ್ತಪಡಿಸಿದ್ದು ಈ ಬಾರಿಯ ಒಲಿಂಪಿಕ್ಸ್ನ 4X400 ಮೀಟರ್ಸ್ ರಿಲೇ ತಂಡದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಪೂವಮ್ಮ.
26 ವರ್ಷದ ಪೂವಮ್ಮ ಎರಡು ವರ್ಷಗಳ ಹಿಂದೆ ಇಂಚೆನ್ ಏಷ್ಯನ್ ಕ್ರೀಡಾಕೂಟದಲ್ಲಿ 400 ಮೀಟರ್ಸ್ ಓಟ ಮತ್ತು ರಿಲೇ ತಂಡದಲ್ಲಿ ಚಿನ್ನ ಜಯಿಸಿದ್ದರು.
ಹೋದ ತಿಂಗಳು ಬೆಂಗಳೂರಿನಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾನ್ ಪ್ರಿ ಅಥ್ಲೆಟಿಕ್ಸ್ನಲ್ಲಿ ರಿಲೇ ತಂಡ ಉತ್ತಮ ಸಾಮರ್ಥ್ಯ ತೋರಿತ್ತು. ಇದರಲ್ಲಿ ಪೂವಮ್ಮ ಅವರ ಚುರುಕಿನ ವೇಗದ ಕೊಡುಗೆಯೂ ಇತ್ತು.

ಪೂವಮ್ಮ ಸ್ಥಾನ ಹೊಂದಿರುವ 4X400 ಮೀ. ರಿಲೇ ಸ್ಪರ್ಧೆ ಆಗಸ್ಟ್ 19ರಂದು ನಡೆಯಲಿದೆ. ಬ್ರೆಜಿಲ್ಗೆ ತೆರಳುವ ಮುನ್ನ ಅವರು ನಗರದ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡಿದ್ದಾರೆ.

‘ಕೆಲವು ವರ್ಷಗಳ ಹಿಂದೆ 10 ರಿಂದ 15 ಅಥ್ಲೀಟ್ಗಳು ಭಾರತದಿಂದ ಒಲಿಂಪಿಕ್ಸ್ಗೆ ಅರ್ಹತೆ ಪಡೆದರೆ ಅದೇ ದೊಡ್ಡ ಸಾಧನೆ ಎನಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿ ಅಥ್ಲೀಟ್ಗಳು ಅರ್ಹತೆ ಪಡೆದಿದ್ದಾರೆ. ನಮ್ಮಲ್ಲಿಯೂ ಸ್ಪರ್ಧೆ ಹೆಚ್ಚಾಗುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ’ ಎಂದು ಪೂವಮ್ಮ ನುಡಿದರು.

‘2008ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದಾಗ ಒಲಿಂಪಿಕ್ಸ್ ಅನುಭವವನ್ನು ಕಣ್ಣಾರೆ ಕಂಡಿದ್ದೆ. ಆಗ ಅನುಭವಿ ಅಥ್ಲೀಟ್ಗಳ ಸ್ಪರ್ಧೆಗಳನ್ನು ನೋಡಿದ್ದರಿಂದ ಈಗ ತುಂಬಾ ಅನುಕೂಲವಾಗಿದೆ. ನಿರ್ಮಲಾ, ಅನಿಲ್ದಾ, ಜಿಷ್ನಾ ಅವರು ತಂಡದಲ್ಲಿರುವ ಕಾರಣ ರಿಯೊದಲ್ಲಿ ಫೈನಲ್ ಪ್ರವೇಶಿಸಲು ಉತ್ತಮ ಅವಕಾಶವಿದೆ’ ಎಂದೂ ಪೂವಮ್ಮ ನುಡಿದರು.

‘ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಈ ಬಾರಿ ನಮಗೆ ಸಾಕಷ್ಟು ಅವಕಾಶಗಳು ಲಭಿಸಿದವು. ನಮ್ಮಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್ಷಿಪ್ಗಳು ಇನ್ನೂ ಹೆಚ್ಚು ನಡೆಯಬೇಕು. ಜಮೈಕಾ, ಎಥಿಯೋಪಿಯಾ ಅಥ್ಲೀಟ್ಗಳ ಜೊತೆ ಹೆಚ್ಚು ಅಭ್ಯಾಸ ಮಾಡಬೇಕು. ಆಗ ನಾವೂ ವಿಶ್ವದ ಶ್ರೇಷ್ಠ ಅಥ್ಲೀಟ್ಗಳು ಎನಿಸಿಕೊಳ್ಳಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

‘2020ರ ಒಲಿಂಪಿಕ್ಸ್ಗೆ ಭಾರತದ ಅಥ್ಲೀಟ್ಗಳ ಸಂಖ್ಯೆ ಈಗಿರುವುದಕ್ಕಿಂತಲೂ ದುಪ್ಪಟ್ಟಾಗಲಿದೆ. ಆಗ ಪದಕದ ಅವಕಾಶವೂ ಹೆಚ್ಚಲಿದೆ. ಆದ್ದರಿಂದ ಈಗಿನಿಂದಲೇ ಟೋಕಿಯೊ ಕೂಟಕ್ಕೆ ಅಭ್ಯಾಸ ನಡೆಸುತ್ತಿದ್ದೇವೆ’ ಎಂದೂ ಪೂವಮ್ಮ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.