ಬಸವ ಜಯಂತಿ: 2019 ಬೈಕ್‌ಗಳ ರ್‍ಯಾಲಿ

ಸೋಮವಾರ, ಮೇ 20, 2019
28 °C
ಮೂರು ದಿನಗಳ ವಿವಿಧ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ

ಬಸವ ಜಯಂತಿ: 2019 ಬೈಕ್‌ಗಳ ರ್‍ಯಾಲಿ

Published:
Updated:
Prajavani

ಬೀದರ್: 2019ನೇ ಸಾಲಿನ ಬಸವ ಜಯಂತಿ ಪ್ರಯುಕ್ತ ನಗರದಲ್ಲಿ ಭಾನುವಾರ 2019 ಬೈಕ್‌ಗಳ ರ್‌್್ಯಾಲಿ ನಡೆಯಿತು.

ಬಸವ ಜಯಂತಿ ಉತ್ಸವ ಸಮಿತಿ ಸಂಘಟಿಸಿದ್ದ ರ‍್ಯಾಲಿ ಸಾಯಿ ಆದರ್ಶ ಶಾಲೆ ಆವರಣದಿಂದ ಆರಂಭಗೊಂಡಿತು. ಅಲ್ಲಿಂದ ಜನರಲ್ ಕಾರ್ಯಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಭಗತಸಿಂಗ್ ವೃತ್ತ, ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಸಿದ್ಧಾರೂಢ, ಮಠ, ರೈಲ್ವೆ ಕೆಳಸೇತುವೆ, ಮಹಾವೀರ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಮಡಿವಾಳ ಮಾಚಿದೇವ ವೃತ್ತ, ಬಸ್ ನಿಲ್ದಾಣ, ಶಿವನಗರ, ನೌಬಾದ್ ಮೂಲಕ ಹಾಯ್ದು ಪಾಪನಾಶ ದೇಗುಲಕ್ಕೆ ತಲುಪಿ ಮುಕ್ತಾಯಗೊಂಡಿತು.

ರ‍್ಯಾಲಿಯಲ್ಲಿ ಬಸವ ಪರ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಬಸವ ಭಕ್ತರು ಶುಭ್ರ ವಸ್ತ್ರ ಧರಿಸಿದ್ದರು. ತಲೆ ಮೇಲೆ ಟೊಪ್ಪಿಗೆ, ಕೊರಳಲ್ಲಿ ಸ್ಕಾರ್ಪ್ ಧರಿಸಿದ್ದರು. ಬೈಕ್‌ಗಳಿಗೆ ಷಟ್‌ಸ್ಥಲ ಧ್ವಜಗಳನ್ನು ಕಟ್ಟಿಕೊಂಡಿದ್ದರು.
ಜಗಜ್ಯೋತಿ ಬಸವೇಶ್ವರರಿಗೆ ಜಯವಾಗಲಿ, ಬಸವ ಜಯಂತಿ ಉತ್ಸವಕ್ಕೆ ಜಯವಾಗಲಿ, ಭಾರತ ದೇಶ ಜೈ ಬಸವೇಶ, ಏಕ ಲಿಂಗಾಯತ ಕೋಟಿ ಲಿಂಗಾಯತ ಎನ್ನುವ ಘೋಷಣೆಗಳು ಮೊಳಗಿದವು.
ಬಸವ ಭಕ್ತರು ರ‍್ಯಾಲಿಯಲ್ಲಿ ಶಿಸ್ತು ಬದ್ಧವಾಗಿ ಸಾಗುವ ಮೂಲಕ ಗಮನ ಸೆಳೆದರು. ಯುವತಿಯರು ತಲೆ ಮೇಲೆ ಪೇಟ ಧರಿಸಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ನಗರದ ಹಾರೂರಗೇರಿ, ಕುಂಬಾರವಾಡ, ಲಾಡಗೇರಿ, ವಿದ್ಯಾನಗರ, ಮಹೇಶನಗರ, ಶಿವನಗರ, ಕೃಷಿನಗರ, ಸಾಯಿನಗರ, ರಾಂಪುರೆ ಕಾಲೊನಿ, ಅಲ್ಲಮಪ್ರಭುನಗರ, ಕೈಲಾಸನಗರ, ಆದರ್ಶ ನಗರ, ಯದಲಾಪುರ, ಮರಕಲ್, ಜನವಾಡ, ಚಿದ್ರಿ, ಕಮಠಾಣ, ಮಾಳೆಗಾಂವ್, ಅಷ್ಟೂರು, ಕೊಳಾರ(ಕೆ), ನಿಜಾಂಪುರ, ಬಕ್ಕಚೌಡಿ, ಕೊಳಾರ(ಬಿ), ಆಣದೂರು, ಚೊಂಡಿ, ಚೌಳಿ ಅಷ್ಟೂರು, ಗ್ರಾಮಗಳ ಬಸವಪರ ಸಂಘಟನೆಗಳ ಪದಾಧಿಕಾರಿಗಳು, ಬಸವ ಭಕ್ತರು ಭಾಗವಹಿಸಿದ್ದರು.

ರ‍್ಯಾಲಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ‘ಬಸವ ಜಯಂತಿ ಉತ್ಸವವು ಸರ್ವರ ಉತ್ಸವವಾಗಿದೆ’ ಎಂದು ತಿಳಿಸಿದರು.

‘ಬಸವ ಭಕ್ತರು ಬಸವ ಜಯಂತಿಯ ದಿನ ಮನೆ ಮನೆಗಳಲ್ಲೂ ಬಸವಣ್ಣನವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಬೇಕು. ಮನೆಗಳಿಗೆ ದೀಪಾಲಂಕಾರ ಮಾಡಬೇಕು. ಷಟ್‌ಸ್ಥಲ ಧ್ವಜಾರೋಹಣಗೈಯಬೇಕು’ ಎಂದು ಹೇಳಿದರು.

ಮುಖಂಡ ಗುರುನಾಥ ಕೊಳ್ಳೂರು, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಪ್ರಮುಖರಾದ ಶಿವಶರಣಪ್ಪ ವಾಲಿ, ಪಂಪಾವತಿ ಪಾಟೀಲ, ಶಕುಂತಲಾ ವಾಲಿ, ಶಕುಂತಲಾ ಬೆಲ್ದಾಳೆ, ಬಾಬುವಾಲಿ, ಶರಣಪ್ಪ ಮಿಠಾರೆ, ಸುರೇಶ ಚನಶೆಟ್ಟಿ, ಹಾವಶೆಟ್ಟಿ ಪಾಟೀಲ, ರಾಜಕುಮಾರ ಕಮಠಾಣೆ, ರಾಜೇಂದ್ರಕುಮಾರ ಗಂದಗೆ, ವಿರೂಪಾಕ್ಷ ಗಾದಗಿ, ಬಸವರಾಜ ಭತಮುರ್ಗೆ, ರಜನೀಶ ವಾಲಿ, ಬಸವರಾಜ ಪಾಟೀಲ ಹಾರೂರಗೇರಿ, ಅಶೋಕ ದಿಡಗೆ, ಜಗನ್ನಾಥ ಶಿವಯೋಗಿ, ವೀರಶೆಟ್ಟಿ ಚನಶೆಟ್ಟಿ, ಸಂಗಮೇಶ ನೇಳಗೆ, ಸಿದ್ಧಾರೂಢ ಭಾಲ್ಕೆ,,ಆನಂದ ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !