ಭಾನುವಾರ, ಮಾರ್ಚ್ 7, 2021
27 °C

ಅತ್ಯಾಚಾರ ಯತ್ನ: ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಾರ್ಕಿಂಗ್‌ನಲ್ಲಿ ಒಂಟಿಯಾಗಿ ಸಿಕ್ಕ ವಕೀಲೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದ ಸೆಕ್ಯುರಿಟಿ ಗಾರ್ಡ್‌ನನ್ನು ಅಶೋಕನಗರ ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ.

ರಾಜೇಶ್ ಸಿಂಗ್ (44) ಬಂಧಿತ ಆರೋಪಿ. ಜ.25ರ ರಾತ್ರಿ 11.30ರ ಸುಮಾರಿಗೆ ವಕೀಲೆ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದ್ದಾಗ ಆರೋಪಿ ಕೃತ್ಯ ಎಸಗಿದ್ದ. ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಹೊರಟ ಪೊಲೀಸರು, ಆತನನ್ನು ಹುಟ್ಟೂರಿನಲ್ಲೇ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.

ಸಂತ್ರಸ್ತೆ ದೂರು: ‘ಹೆಚ್ಚು ಕೆಲಸ ಇದ್ದುದರಿಂದ ಶುಕ್ರವಾರ ರಾತ್ರಿ ಕಚೇರಿಯಲ್ಲೇ ಉಳಿಯಲು ನಿರ್ಧರಿಸಿದ್ದೆ. 11.50ಕ್ಕೆ ಏಕಾಏಕಿ ಕಟ್ಟಡದ ವಿದ್ಯುತ್ ಸ್ಥಗಿತವಾಯಿತು. ಇದರಿಂದ ಗಾಬರಿಯಾಗಿ ಮನೆಗೆ ಹೊರಟ್ಟಿದ್ದೆ’ ಎಂದು ಸಂತ್ರಸ್ತೆ ದೂರಿದ್ದರು.

‘ಮೊಬೈಲ್ ಟಾರ್ಚ್ ಹಾಕಿಕೊಂಡು ಪಾರ್ಕಿಂಗ್‌ಗೆ ಬಂದಾಗ ಸೆಕ್ಯುರಿಟಿ ಗಾರ್ಡ್‌ ನನ್ನ ಮೇಲೆ ದಾಳಿ ನಡೆಸಿ, ಕೆಳಗೆ ಬೀಳಿಸಿ ಅತ್ಯಾಚಾರಕ್ಕೆ ಯತ್ನಿಸಿದ. ನೆರವಿಗಾಗಿ ಕೂಗಿಕೊಂಡಾಗ ಓಡಿ ಹೋದ’ ಎಂದು ವಿವರಿಸಿದ್ದರು.

‘ಮದ್ಯದ ಅಮಲಿನಲ್ಲಿ ಆ ರೀತಿ ವರ್ತಿಸಿಬಿಟ್ಟೆ. ಪೊಲೀಸರಿಗೆ ಹೆದರಿ ಮರುದಿನ ಬೆಳಿಗ್ಗೆಯೇ ರೈಲಿನಲ್ಲಿ ಹೊರಟು ಹೋಗಿದ್ದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು