ಮಂಗಳವಾರ, ನವೆಂಬರ್ 12, 2019
28 °C

ಬಿಬಿಎಂಪಿ, ಬಿಡಿಎಯಲ್ಲಿ ಟಿಡಿಆರ್ ವಂಚನೆ ಪ್ರಕರಣ: ತನಿಖೆಗೆ ಎಸ್ಐಟಿ ರಚನೆ

Published:
Updated:

ಬೆಂಗಳೂರು: ಬಿಬಿಎಂಪಿ ಮತ್ತು ಬಿಡಿಎಯಲ್ಲಿ 2007ರಿಂದ 2019ರವರೆಗೆ ನಡೆದ ಬಹುಕೋಟಿ ಟಿಡಿಆರ್ ವಂಚನೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದೆ.

ಹೈಕೋರ್ಟ್ ಆದೇಶದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಎಸ್‌ಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿದೆ. ಆರು ತಿಂಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿತ್ತು.

ಪೊಲೀಸ್ ಅಧಿಕಾರಿಗಳು, ಒಬ್ಬ ಕೆಎಎಸ್ ಅಧಿಕಾರಿ, ಇಬ್ಬರು ಸಹಾಯಕ ಎಂಜಿನಿಯರ್‌ ಗಳು, ಇಬ್ಬರು ಸರ್ವೇಯರ್‌ಗಳು, ಇಬ್ಬರು ಇನ್‌ಸ್ಪೆಕ್ಟರ್‌ ಸೇರಿ 20 ಸದಸ್ಯರು ಎಸ್ಐಟಿ ತಂಡದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)