ಮಂಗಳವಾರ, ಸೆಪ್ಟೆಂಬರ್ 28, 2021
22 °C

ಅಬಕಾರಿ ಇಲಾಖೆಗೆ ನೂತನ ಕಟ್ಟಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಹಾಗೂ ಬೆಂಗಳೂರು ಪಶ್ಚಿಮ ವಿಭಾಗದ ಅಬಕಾರಿ ಉಪ ಆಯುಕ್ತರ ನೂತನ ಕಚೇರಿಯ ಕಟ್ಟಡವನ್ನು ರಾಜ್ಯ ಅಬಕಾರಿ ಆಯುಕ್ತ ವಿ.ಯಶವಂತ್ ಮಂಗಳವಾರ ಉದ್ಘಾಟಿಸಿದರು.

ಅಬಕಾರಿ ಜಂಟಿ ಆಯುಕ್ತರ ಕಚೇರಿ ಈವರೆಗೂ ಜೆ.ಸಿ.ರಸ್ತೆಯ ಪೂರ್ಣಿಮಾ ಕಾಂಪ್ಲೆಕ್ಸ್‌ನ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಮೈಸೂರು ರಸ್ತೆ ಬ್ಯಾಟರಾಯನಪುರ ಪೊಲೀಸ್ ಠಾಣೆ ಬಳಿ ನಿರ್ಮಾಣವಾಗಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.‌

ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (ಕೆಎಸ್‌ಬಿಸಿಎಲ್‌) ಸಂಸ್ಥೆ ನಿರ್ಮಿಸಿದೆ. ನೆಲ ಮಹಡಿಯಲ್ಲಿ ಅಬಕಾರಿ ಜಂಟಿ ಆಯುಕ್ತರ ಕಚೇರಿ (ಜಾರಿ ಮತ್ತು ತನಿಖೆ) ಬೆಂಗಳೂರು ವಿಭಾಗ, ವಿಜಯನಗರ ಇಐಬಿ-2 ಅಬಕಾರಿ ಅಧೀಕ್ಷರ ಕಚೇರಿ, ಗಾಂಧಿನಗರ ಉಪವಿಭಾಗ ಅಬಕಾರಿ ಉಪ ಅಧೀಕ್ಷಕರ ಕಚೇರಿ ಹಾಗೂ ಚಿಕ್ಕಪೇಟೆ ಅಬಕಾರಿ ನಿರೀಕ್ಷಕರ ಕಚೇರಿ ಇದೆ.

ಎರಡನೇ ಮಹಡಿಯಲ್ಲಿ ಬೆಂಗಳೂರು ಪಶ್ಚಿಮ ಅಬಕಾರಿ ಉಪ ಆಯುಕ್ತರ ಕಚೇರಿ, ಹನುಮಂತನಗರ ಹಾಗೂ ಚಾಮರಾಜಪೇಟೆ ವಲಯಗಳ ಅಬಕಾರಿ ನಿರೀಕ್ಷಕರ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ಬೆಂಗಳೂರು ನಗರ ಜಿಲ್ಲೆ ಅಬಕಾರಿ ಉಪ ಆಯುಕ್ತ ಬಿ.ಆರ್.ಹಿರೇಮಠ್ ತಿಳಿಸಿದರು.

ಅಬಕಾರಿ ಜಂಟಿ ಆಯುಕ್ತ ಎಲ್.ನಾಗೇಶ್, ಅಪರ ಆಯುಕ್ತ (ಅಪರಾಧ) ವೆಂಕಟರಾಜು, ಕೆಎಸ್ಇಎಸ್ ಅಪರ ಆಯುಕ್ತ ಎಸ್.ಎಲ್.ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು