ಶುಕ್ರವಾರ, ಆಗಸ್ಟ್ 7, 2020
22 °C

ಮಾತಂಗ ಭವನ ಕಾಮಗಾರಿ ಪರಿಶೀಲಿಸಿದ ಮಾಜಿ ಸಚಿವ ಎಚ್‌. ಆಂಜನೇಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹೊಸಪೇಟೆ: ಮಾಜಿ ಸಚಿವ ಎಚ್‌. ಆಂಜನೇಯ ಅವರು ಶುಕ್ರವಾರ ತಾಲ್ಲೂಕಿನ ಹಂಪಿ ರಸ್ತೆಯ ಅನಂತಶಯನಗುಡಿ ಸಮೀಪ ನಿರ್ಮಾಣಗೊಳ್ಳುತ್ತಿರುವ ಮಹರ್ಷಿ ಮಾತಂಗ ಮುನಿ ಅವರ ಸಮುದಾಯ ಭವನದ ಕಾಮಗಾರಿ ಪರಿಶೀಲನೆ ನಡೆಸಿದರು.

ಎಂಜಿನಿಯರ್‌ಗಳಾದ ಹುಲುಗಪ್ಪ ಕಟ್ಟಿಮನಿ, ಸೋಮಶೇಖರ್‌ ಅವರಿಂದ ಕಾಮಗಾರಿ ಕುರಿತು ಮಾಹಿತಿ ಪಡೆದ ಆಂಜನೇಯ ಅವರು, ‘ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಗುಣಮಟ್ಟದ ಕೆಲಸ ನಡೆಯಬೇಕು’ ಎಂದು ತಿಳಿಸಿದರು.

‘ಸಮಾಜದ ಜನರ ಅಪೇಕ್ಷೆಯಂತೆ ಮಹರ್ಷಿ ಮಾತಂಗ ಮುನಿಗಳ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಸಮಾಜದ ಸಂಘಟನೆ ಕುರಿತ ಚರ್ಚೆ, ಸಭೆ, ಸಮಾರಂಭಗಳನ್ನು ನಡೆಸಲು ಈ ಭವನ ಉಪಯೋಗವಾಲಿದೆ’ ಎಂದು ಹೇಳಿದರು.

ಪೂರ್ಣಾನಂದ ಭಾರತಿ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಎ. ಮಾನಯ್ಯ, ಮುಖಂಡರಾದ ಮುಂಡರಗಿ ನಾಗರಾಜ್‌, ಗೂಳೆಪ್ಪ, ಬಲ್ಲಾ ಹುಣ್ಸಿ ರಾಮಣ್ಣ, ಎ. ಬಸವರಾಜ, ನಿಂಬಗಲ್‌ ರಾಮಕೃಷ್ಣ, ಹುಲುಗಪ್ಪ, ಕಲ್ಲಳ್ಳಿ ಧರ್ಮಪ್ಪ, ಮೆಟ್ರಿ ಮಾರೆಣ್ಣ, ಮರಿದಾಸ್‌, ಓಬಳಾಪತಿ, ಉದಯಕುಮಾರ್‌, ಚನ್ನಬಸವ, ಎಚ್‌.ಬಿ. ಶ್ರೀನಿವಾಸ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು