ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಲೆ ಖರೀದಿಗೆ ವಿಜಯ್ ಮಲ್ಯಗೆ ಹವಾಲಾ ಹಣ!

Last Updated 28 ನವೆಂಬರ್ 2018, 20:32 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಿ ವಿಜಯ್ ಮಲ್ಯ ಒಡೆತನದ ಊಟಿಯಲ್ಲಿರುವ ಬಂಗಲೆ ಖರೀದಿಗೆ ಹವಾಲಾ ಮಾರ್ಗದಲ್ಲಿ ಹಣ ಬರುತ್ತಿರುವ ಸುಳಿವು ಹಿಡಿದು ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಮೂವರನ್ನು ಬಂಧಿಸಿ ₹75 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

ಹೈದರಾಬಾದ್‌ನ ಮುಜಾಹಿದ್ದೀನ್, ನಿಸಾರ್, ಬೆಂಗಳೂರಿನ ವಿ.ವಿ.ಪುರ ನಿವಾಸಿ ಚಿರಾಗ್ ಬಂಧಿತರು‌. ಕುಖ್ಯಾತ ಹವಾಲಾ ಡೀಲರ್ ದಿನೇಶ್ ತಲೆಮರೆಸಿಕೊಂಡಿದ್ದಾನೆ‌ ಎಂದು ಪೊಲೀಸರು ಹೇಳಿದ್ದಾರೆ.

ಊಟಿಯಲ್ಲಿರುವ ಮಲ್ಯ ಅವರ ಬಂಗಲೆಯು ಐದು ವರ್ಷಗಳಿಂದ ಖಾಸಗಿ ಕಂಪನಿಯೊಂದರ ಸುಪರ್ದಿಯಲ್ಲಿತ್ತು‌‌. ಇತ್ತೀಚೆಗೆ ₹7.5 ಕೋಟಿಗೆ ಅದನ್ನು ಖರೀದಿ ಮಾಡಿದ್ದ ಮುಜಾಹಿದ್ದೀನ್, ₹75 ಲಕ್ಷ ಮುಂಗಡ ಕೊಡಲು ಸ್ನೇಹಿತ ನಿಸಾರ್ ಜೊತೆ ಕ್ರೆಟಾ ಕಾರಿನಲ್ಲಿ ( ಟಿ.ಎನ್-43-ಎಚ್-9641) ಸಜ್ಜನ ರಾವ್ ವೃತ್ತಕ್ಕೆ ಬಂದಿದ್ದ.

ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ತಂಡ ದಾಳಿ ನಡೆಸಿದೆ.

ದಿನೇಶ್ ಈ ಒಪ್ಪಂದದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ‌. ಮುಜಾಹೀದ್‌ನಿಂದ ಹಣ ಪಡೆದುಕೊಂಡು ಬರುವಂತೆ ಆತ ತನ್ನ ಸಹಚರ ಚಿರಾಗ್ನನನ್ನು ಸಜ್ಜನ್ ರಾವ್ ವೃತ್ತಕ್ಕೆ ಕಳುಹಿಸಿದ್ದ ಎಂದು ಪೊಲೀಸರು ಮಾಹಿತಿ‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT