ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘₹50 ಸಾವಿರ ಕೋಟಿಗೆ ಹೆಚ್ಚಲಿದೆ ಮಲಬಾರ್‌ ಗೋಲ್ಡ್‌ ವಹಿವಾಟು’

Last Updated 14 ಅಕ್ಟೋಬರ್ 2018, 19:27 IST
ಅಕ್ಷರ ಗಾತ್ರ

ಬೆಂಗಳೂರು: ‘ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ವಹಿವಾಟು 2023ರ ವೇಳೆಗೆ ₹50 ಸಾವಿರ ಕೋಟಿಗೆ ಹೆಚ್ಚಲಿದೆ’ ಎಂದು ಮಲಬಾರ್‌ ಗ್ರೂಪ್‌ನ ಅಧ್ಯಕ್ಷ ಎಂ.ಪಿ. ಅಹಮದ್‌ ಅವರು ತಿಳಿಸಿದರು.

ಕಂಪನಿಯ ಬೆಳ್ಳಿಹಬ್ಬ ಸಂಭ್ರಮ ಹಂಚಿಕೊಳ್ಳಲು ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐದು ವರ್ಷಗಳಲ್ಲಿ ಪ್ರಪಂಚದ ಬೇರೆ ಬೇರೆ ನಗರಗಳಲ್ಲಿ 750 ಮಳಿಗೆಗಳನ್ನು ಆರಂಭಿಸಲಿದ್ದೇವೆ. ಬಾಂಗ್ಲಾದೇಶ, ಶ್ರೀಲಂಕಾ, ಆಸ್ಟ್ರೇಲಿಯಾ, ಕೆನಡಾ, ಈಜಿಪ್ಟ್‌ ಮತ್ತು ಟರ್ಕಿ ರಾಷ್ಟ್ರಗಳಲ್ಲೂ ವಹಿವಾಟು ವಿಸ್ತರಿಸುತ್ತೇವೆ’ ಎಂದು ಹೇಳಿದರು.

‘ಸಣ್ಣ ಮಳಿಗೆಯೊಂದಿಗೆ ಆರಂಭವಾದ ನಮ್ಮ ಕಂಪನಿ ಇಂದು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಚಿನ್ನ, ವಜ್ರದ ಆಭರಣ ತಯಾರಿಕೆ, ಮಾರಾಟದಲ್ಲಿ ಹೆಸರಾಗಿದೆ. ಗ್ರಾಹಕರ ವಿಶ್ವಾಸ ಗಳಿಸಿದೆ. 25,000 ಸಿಬ್ಬಂದಿ ಕಾರ್ಯನಿರ್ವಹಿಸುತಿದ್ದಾರೆ’ ಎಂದು ಹೇಳಿದರು.

ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಪಿ.ಅಬ್ದುಲ್‌ ಸಲಾಂ, ‘ಕಂಪನಿಯ ಕಾರ್ಯನಿರ್ವಹಣೆ ಪಾರದರ್ಶಕವಾಗಿ ನಡೆಯುತ್ತಿದೆ. ಕಂಪನಿಯಲ್ಲಿ ಸದ್ಯ 2,572 ಹೂಡಿಕೆದಾರರು ಇದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT