ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗೇ ಥಳಿಸಿದ ಪಾನಿಪೂರಿ ವ್ಯಾಪಾರಿಗಳು

ನಾಲ್ವರು ಪಾನಿಪೂರಿ ವ್ಯಾಪಾರಿಗಳ ಬಂಧನ
Last Updated 15 ಮಾರ್ಚ್ 2019, 4:09 IST
ಅಕ್ಷರ ಗಾತ್ರ

ಬೆಂಗಳೂರು: ಲಾಠಿ ಕಿತ್ತುಕೊಂಡು ಪೊಲೀಸರನ್ನೇಅಟ್ಟಾಡಿಸಿ ಹೊಡೆದ ನಾಲ್ವರುಪಾನಿಪೂರಿ ವ್ಯಾಪಾರಿಗಳು ಹುಳಿಮಾವು ಪೊಲೀಸರ ಅತಿಥಿಗಳಾಗಿದ್ದಾರೆ.

ಅರಕೆರೆ ಸಮೀಪದ ನಂಜಪ್ಪ ಲೇಔಟ್ ನಿವಾಸಿಗಳಾದ ದಿವ್ಯಜ್ಯೋತಿ ದಾಸ್,ಅಮೀರ್ಬಿಸ್ವಾಸ್, ವಿನೋದ್ ಗುರು ಹಾಗೂ ಅಜಯ್ ಧಮನ್ ಬಂಧಿತರು. ನ್ಯಾಯಾಲಯದ ಆದೇಶದಂತೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಾನ್‌ಸ್ಟೆಬಲ್‌ಗಳಾದ ಚಂದ್ರಶೇಖರ್ ಹಾಗೂ ಸಿದ್ದನಾಯ್ಕ ಬುಧವಾರ ರಾತ್ರಿ 1 ಗಂಟೆ ಸುಮಾರಿಗೆಅರಕೆರೆ ಮುಖ್ಯರಸ್ತೆಯಲ್ಲಿ ಗಸ್ತುತಿರುಗುತ್ತಿದ್ದರು.ಈವೇಳೆ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ಅಮಿರ್ ಹಾಗೂ ವಿನೋದ್, ಸಿಬ್ಬಂದಿಯನ್ನು ನೋಡುತ್ತಿದ್ದಂತೆಯೇ ವಾಹನ ತಿರುಗಿಸಿದ್ದರು. ಇದರಿಂದ ಅನುಮಾನಗೊಂಡ ಸಿಬ್ಬಂದಿ, ಅವರಿಬ್ಬರನ್ನೂ ಹಿಂಬಾಲಿಸಿ ನಂಜಪ್ಪಲೇಔಟ್‌ನಲ್ಲಿಅಡ್ಡಗಟ್ಟಿದರು ಎನ್ನಲಾಗಿದೆ.

‘ವಾಹನದದಾಖಲೆಕೇಳಿದಾಗ ಅವರಿಬ್ಬರೂ ಸರಿಯಾಗಿ ಉತ್ತರಿಸಲಿಲ್ಲ. ಠಾಣೆಗೆಕರೆದೊಯ್ಯಲುಮುಂದಾದಾಗ, ದಿವ್ಯಜ್ಯೋತಿ ದಾಸ್ ಎಂಬಾತ ಇನ್ನಿಬ್ಬರು ಸಹಚರರ ಜತೆ ಬಂದು ಗಲಾಟೆ ಪ್ರಾರಂಭಿಸಿದ.‘ಅವರಿಬ್ಬರೂ ನಮ್ಮ ಹುಡುಗರು.ಸುಮ್ಮನೆ ಬಿಟ್ಟು ಕಳುಹಿಸದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಧಮ್ಕಿ ಹಾಕಿದ.ಕೊನೆಗೆ ಲಾಠಿ ಕಿತ್ತುಕೊಂಡು ಆತ ನಮ್ಮ ಮೇಲೇ ಹಲ್ಲೆ ನಡೆಸಿದರೆ, ಉಳಿದವರು ನಮ್ಮತ್ತ ಕಲ್ಲುಗಳನ್ನು ತೂರಲಾರಂಭಿಸಿದರು’ ಎಂದು ಚಂದ್ರಶೇಖರ್ ದೂರಿನಲ್ಲಿ ಹೇಳಿದ್ದಾರೆ.

‘ಪೆಟ್ಟು ತಪ್ಪಿಸಿಕೊಳ್ಳಲು ನಾವು ಓಡಿದೆವು. ಆದರೂ ಬೆನ್ನಟ್ಟಿ ಬಂದು ಹೊಡೆದ ದಾಸ್, ಕೊನೆಗೆ ಲಾಠಿ ಮುರಿದು ಹಾಕಿದ. ಈ ಹಂತದಲ್ಲಿ ಸಿದ್ದನಾಯ್ಕ ಅವರಿಗೂ ಸೊಂಟಕ್ಕೆ ಒದ್ದ. ಆಗ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಹೆಚ್ಚಿನ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡೆವು.

ಕುಡಿದ ಮತ್ತಿನಲ್ಲಿ ಕೃತ್ಯ
ರಾಜಸ್ಥಾನದ ದಾಸ್, ಆರು ವರ್ಷಗಳಿಂದ ನಂಜಪ್ಪಲೇಔಟ್‌ನಲ್ಲಿ ಪಾನಿಪೂರಿ ಅಂಗಡಿ ಇಟ್ಟುಕೊಂಡಿದ್ದಾನೆ. ಉಳಿದ ಆರೋಪಿಗಳೂ ಆತನ ಬಳಿಯೇ ಕೆಲಸಕ್ಕಿದ್ದವರು. ಕುಡಿದ ಮತ್ತಿನಲ್ಲಿ ಆ ರೀತಿ ವರ್ತಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ’ಎಂದುಹುಳಿಮಾವು ಪೊಲೀಸರುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT