ಮಂಗಳವಾರ, ಅಕ್ಟೋಬರ್ 22, 2019
21 °C

ವಿರೋಧ ಪಕ್ಷದ ನಾಯಕ: ಸಿದ್ದರಾಮಯ್ಯ– ಎಚ್.ಕೆ.ಪಾಟೀಲ ನಡುವೆ ತೀವ್ರ ಪೈಪೋಟಿ

Published:
Updated:

ಬೆಂಗಳೂರು: ವಿಧಾನ ಮಂಡಲದ ಅಧಿವೇಶನ ಆರಂಭಕ್ಕೆ ಒಂದು ದಿನವಷ್ಟೇ ಬಾಕಿ ಇದೆ. ಅಷ್ಟರಲ್ಲಿ ಉಭಯ ಸದನಗಳ ವಿರೋಧಪಕ್ಷದ ನಾಯಕರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡುವುದೇ ಅನುಮಾನವಿದ್ದು, ಗೊಂದಲ ಮುಂದುವರಿದಿದೆ. ಹೀಗಾಗಿ ವಿಧಾನಸಭೆ, ಪರಿಷತ್‌ನಲ್ಲಿ ಅಧಿಕೃತವಾಗಿ ವಿರೋಧ ‍ಪಕ್ಷದ ನಾಯಕರಿಲ್ಲದೆ ಅಧಿವೇಶನ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬುಧವಾರ ಬೆಂಗಳೂರಿಗೆ ಬಂದು ಹೆಸರು ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಬರುವುದು ಖಚಿತವಾಗಿಲ್ಲ. ಕೊನೆ ಗಳಿಗೆಯಲ್ಲಿ ದೆಹಲಿಯಲ್ಲೇ ಪಟ್ಟಿ ಪ್ರಕಟವಾಗಬಹುದು ಎನ್ನುವ ಮಾತನ್ನು ಕೆಲವರು ಆಡುತ್ತಿದ್ದಾರೆ.

ಪಕ್ಷದಲ್ಲಿ ಬಣ ರಾಜಕೀಯ ಬಿರುಸುಗೊಂಡಿದ್ದು, ಯಾರಿಗೆ ‘ಅಧಿಕಾರ’ ಸಿಗಬಹುದು ಎಂಬ ಲೆಕ್ಕಾಚಾರ ನಡೆದಿದೆ. ಇದರಿಂದ ಎಲ್ಲರ ದೃಷ್ಟಿ ಹೈಕಮಾಂಡ್‌ನತ್ತ ನೆಟ್ಟಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಅವರು ಭಾನುವಾರ ಬೆಂಗಳೂರಿನಲ್ಲಿ ಪಕ್ಷದ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇದರ ಆಧಾರದ ಮೇಲೆ ಪಟ್ಟಿ ಸಿದ್ಧಪಡಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದ್ದು, ಅವರ ಒಪ್ಪಿಗೆಗಾಗಿ ಎದುರು ನೋಡಲಾಗುತ್ತಿದೆ.

ವಿಧಾನಸಭೆ ಹಾಗೂ ಪರಿಷತ್ ವಿರೋಧ ಪಕ್ಷದ ನಾಯಕರು, ಉಪನಾಯಕರು, ಎರಡೂ ಸದನಗಳ ಮುಖ್ಯ ಸಚೇತಕರನ್ನು ನೇಮಕ ಮಾಡಬೇಕಿದೆ.  

ಕಾಂಗ್ರೆಸ್ ಸಭೆ ಇಂದು
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಸಿದ್ದರಾಮಯ್ಯ ಅಧ್ಯಕ್ಷೆಯಲ್ಲಿ ಬುಧವಾರ ಸಂಜೆ 5 ಗಂಟೆಗೆ ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ನಡೆಯಲಿದೆ. 

ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ವಿಚಾರಗಳು ಹಾಗೂ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಚರ್ಚೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)