ಶುಕ್ರವಾರ, ಸೆಪ್ಟೆಂಬರ್ 24, 2021
21 °C
‘ಬಾಲ್ಯದಲ್ಲಿ ಮಕ್ಕಳಿಗೆ ಮಾನಸಿಕ ಒತ್ತಡ ಹೇರದಿರಿ’: ಜೋಸೆಫ್‌ ಮ್ಯಾಥ್ಯು

ವಿರಾಜಪೇಟೆ ರೋಟರಿಯಿಂದ ಪ್ಲೇ ಸ್ಕೂಲ್ ಪ್ರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಬಾಲ್ಯದಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಶೈಕ್ಷಣಿಕ ಒತ್ತಡ ಹೇರಬಾರದು. ಮಕ್ಕಳಿಗೆ ಪೋಷಕರೇ ಜೀವನದ ಮೊದಲ ಆದರ್ಶ ವ್ಯಕ್ತಿಗಳಾಗಬೇಕು’ ಎಂದು ರೋಟರಿ ಜಿಲ್ಲಾ ಗವರ್ನರ್‌ ಜೋಸೆಫ್‌ ಮ್ಯಾಥ್ಯು ಕಿವಿಮಾತು ಹೇಳಿದರು.

ವಿರಾಜಪೇಟೆ ರೋಟರಿ ಕ್ಲಬ್ ವತಿಯಿಂದ ರೋಟರಿ ಶಾಲೆಯಲ್ಲಿ ಪ್ಲೇ ಸ್ಕೂಲ್ ಉದ್ಘಾಟಿಸಿ ಮಾತನಾಡಿದ ಅವರು, ‘ಬಾಲ್ಯದಲ್ಲಿ ಮಕ್ಕಳು ಸ್ವಚ್ಛಂದವಾಗಿ ಇರಬೇಕು. ಅವರ ಮೇಲೆ ಅನಗತ್ಯವಾದ ಒತ್ತಡ ಹಾಕಿ ಸಂತೋಷಕ್ಕೆ ಅಡ್ಡಿ ಉಂಟು ಮಾಡದಿರಿ ಎಂದು ಸಲಹೆ ನೀಡಿದರಲ್ಲದೇ, ಮಕ್ಕಳಿಗೆ ತಮ್ಮ ಪೋಷಕರೇ ಮೊದಲ ಆದರ್ಶಪ್ರಾಯರು. ಪೋಷಕರ ನಡೆ– ನುಡಿಗಳನ್ನೇ ಮಕ್ಕಳು ಅನುಕರಿಸುತ್ತಾರೆ. ಹೀಗಾಗಿ, ಮಕ್ಕಳ ಬಗ್ಗೆ ಅತ್ಯಂತ ಕಾಳಜಿ ವಹಿಸಿ ಸೂಕ್ತ ರೀತಿಯಲ್ಲಿ ವರ್ತಿಸುವುದು ಸೂಕ್ತ’ ಎಂದೂ ಅಭಿಪ್ರಾಯಪಟ್ಟರು.

‘180 ದೇಶಗಳಲ್ಲಿ ಕಾಯಾ೯ಚರಿಸುತ್ತಿರುವ ರೋಟರಿ ಸಂಸ್ಥೆಯ ಸಾವಿರಾರು ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ವಿದ್ಯಾಥಿ೯ಗಳನ್ನು ಸಮಾಜಕ್ಕೆ ನೀಡುತ್ತಿದೆ. ರೋಟರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಥಿ೯ಗಳಿಗೆ ವಿಭಿನ್ನ ರೀತಿಯ ವಿದ್ಯಾಭ್ಯಾಸ ದೊರಕುತ್ತಿದೆ. ಶಿಕ್ಷಣದೊಂದಿಗೆ ಸಾಮಾಜಿಕ ಸೇವಾ ಮನೋಭಾವವನ್ನು ರೋಟರಿಯ ಶಿಕ್ಷಣ ಸಂಸ್ಥೆಗಳು ಕಲಿಸುತ್ತಿದೆ’ ಎಂದೂ ಜೋಸೆಫ್‌ ಮ್ಯಾಥ್ಯು ಹೇಳಿದರು.

ಕಾಯ೯ಕ್ರಮದಲ್ಲಿ ರೋಟರಿ ವಲಯ 6ರ ಸಹಾಯಕ ಗವರ್ನರ್‌ ಪಿ.ನಾಗೇಶ್, ವಲಯ 6ರ ಕಾಯ೯ದಶಿ೯ ಅನಿಲ್ ಎಚ್.ಟಿ., ಜೋನಲ್ ಲೆಫ್ಟಿನೆಂಟ್ ಡಾ.ಎಸ್.ವಿ.ನರಸಿಂಹನ್, ರೋಟರಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟೀರ ಸುನೀಲ್ ನಾಣಯ್ಯ , ಆಡಳಿತಾಧಿಕಾರಿ  ಪ್ರಮೀಳಾ ಆರ್.ಪಿ.,  ಮುಖ್ಯೋಪಾಧ್ಯಾಯಿನಿ ಇಂದಿರಾ ಸುಬ್ಬಯ್ಯ, ರೋಟರಿ ಅಧ್ಯಕ್ಷ ಕೆ.ಎಚ್.  ಆದಿತ್ಯ, ಕಾಯ೯ದಶಿ೯ ಭರತ್ ರಾಮ್ ರೈ ಸೇರಿದಂತೆ ರೋಟರಿ ಪ್ರಮುಖರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು